ಉಪ್ಪಿನಂಗಡಿ: ಡಾ. ರಾಜಾರಾಮ್ ಕೆ.ಬಿ. ಹೆಸರಲ್ಲಿ ನಕಲಿ ಇನ್ಸ್ಟ್ರಾಗ್ರಾಮ್ ಖಾತೆ ಹಣಕ್ಕಾಗಿ ಬೇಡಿಕೆ: ಪೊಲೀಸ್ ದೂರು

0

ಉಪ್ಪಿನಂಗಡಿ: ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಉಪ್ಪಿನಂಗಡಿಯಲ್ಲಿ ಜನಪ್ರಿಯ ದಂತವೈದ್ಯರಾಗಿರುವ ಡಾ.ರಾಜಾರಾಮ ಕೆ.ಬಿ.ಯವರ ಹೆಸರಿನಲ್ಲಿ ವಂಚಕರ ಜಾಲವೊಂದು ಇನ್ಸ್ಟ್ರಾಗ್ರಾಮ್ ನಕಲಿ ಖಾತೆಯನ್ನು ಸೃಷ್ಟಿಸಿ ಸಾರ್ವಜನಿಕರಿಂದ ಹಣವನ್ನು ಕೇಳಲಾಗುತ್ತಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಡಾ. ರಾಜಾರಾಮ ಕೆ.ಬಿ.ಯವರು, ತನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಹಲವರಿಗೆ ಹಣಕ್ಕಾಗಿ ಸಂದೇಶವನ್ನು ಕಳುಹಿಸುತ್ತಿರುವ ಕೃತ್ಯವು ಗಮನಕ್ಕೆ ಬಂದಿರುವುದರಿಂದ ಈ ಕೃತ್ಯಗೈದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ ಹಾಗೂ ಪ್ರಸಕ್ತ ದಿನಗಳಲ್ಲಿ ಬಗೆ ಬಗೆಯ ರೂಪದಲ್ಲಿ ಸಾರ್ವಜನಿಕರನ್ನು ವಂಚಿಸುವ ಕೃತ್ಯಗಳು ಎಲ್ಲೆಡೆ ನಡೆಯುತ್ತಿರುವುದರಿಂದ ನಾಗರಿಕ ಸಮಾಜ ಜಾಗೃತಗೊಳ್ಳಬೇಕಾಗಿದೆ ಎಂದು ಅವರು ವಿನಂತಿಸಿದ್ದಾರೆ.


ಫೇಕ್: ಡಾ. ರಾಜಾರಾಮ್ ಕೆ.ಬಿ. ಅವರ ಹೆಸರಿನಲ್ಲಿ ವಂಚನಾ ಜಾಲದವರು ಸೃಷ್ಟಿಸಿರುವ ನಕಲಿ ಇನ್ಸ್ಟ್ರಾಗ್ರಾಮ್ ಖಾತೆ
ಒರಿಜಿನಲ್: ಡಾ. ರಾಜಾರಾಮ್ ಕೆ.ಬಿ. ಅವರ ಅಸಲಿ ಇನ್ಸ್ಟ್ರಾಗ್ರಾಮ್ ಖಾತೆ

LEAVE A REPLY

Please enter your comment!
Please enter your name here