ಡೊಂಬಯ್ಯ ನಲಿಕೆ ಅವರಿಗೆ ಜಾನಪದ ರಾಜ್ಯ ಪ್ರಶಸ್ತಿ  

0

ಸವಣೂರು : ಕಡಬ ತಾಲೂಕಿನ  ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಅವರು ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್‌. ಬಾಲಾಜಿ ಪ್ರಶಸ್ತಿಯನ್ನು ಪ್ರಕಟಿಸಿದ್ದು ದ.ಕ.ದಿಂದ ಡೊಂಬಯ್ಯ ನಲಿಕೆ ಅವರನ್ನು ಸೇರಿಸಿ ರಾಜ್ಯದ 20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ.  ಸಂಘಟಕ, ಉತ್ತಮ ಅಧಿಕಾರಿ ಆಗಿದ್ದ ದಿ. ಟಿ. ಕೆ. ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು 5 ಸಾವಿರ ನಗದು ಪುರಸ್ಕಾರ ಜೊತೆಗೆ ರಾಜ್ಯಮಟ್ಟದ ಗೌರವ  ಒಳಗೊಂಡಿದೆ. 

ಬೆಂಗಳೂರಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಸ್ವಾಯತ್ತ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಟೋಬ‌ರ್ 26ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಡೊಂಬಯ್ಯ ನಲಿಕೆ ಅವರು ದಿ.ಐತ್ತ ಅಜಿಲ ಮತ್ತು ದಿ.ದುಗ್ಗಮ್ಮ ದಂಪತಿಗಳ ಏಳು ಮಕ್ಕಳಲ್ಲಿ ಕೊನೆಯ ಮಗನಾಗಿ 13-7-1976ರಲ್ಲಿ ಜನಿಸಿದ್ದು, ಕೊಪ್ಪ ಸರಕಾರಿ ಶಾಲೆ ಮತ್ತು ಕುದ್ಮಾರು ಸರಕಾರಿ ಶಾಲೆಯಲ್ಲಿ  7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ತನ್ನ ತಂದೆಯ ಒತ್ತಾಸೆಯಂತೆ  16ನೇ ವಯಸ್ಸಿನಲ್ಲಿ ದೈವಾರಾಧನೆಯಲ್ಲಿ  ತೊಡಗಿಸಿಕೊಂಡಿದ್ದು, ಶಿರಾಡಿ, ಕಲ್ಲುರ್ಟಿ, ಉಳ್ಳಾಕುಲು, ಚಾಮುಂಡಿ, ಪಂಜುರ್ಲಿ ದೈವಗಳಿಗೆ ನೇಮ ಕಟ್ಟುತ್ತಿದ್ದಾರೆ. ಇವರು ಈವರೆಗೆ ಸುಮಾರು 3000 ಕ್ಕೂ ಹೆಚ್ಚು ಕಡೆಗಳಲ್ಲಿ ದೈವದ ನರ್ತನ ಸೇವೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here