ಉಪ್ಪಿನಂಗಡಿ: ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಅ.24ರಂದು ಸಂಜೆ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಮುಕುಂದ ಗೌಡ ಬಜತ್ತೂರು ಮಾತನಾಡಿ, ಪುತ್ತೂರಿನವರೇ ಆದ ಕಿಶೋರ್ ಕುಮಾರ್ ಬೊಟ್ಯಾಡಿಯವರು ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ಪುತ್ತೂರಿನವರಿಗೆ ಬಿಜೆಪಿ ಶಾಸಕರಿಲ್ಲ ಎಂಬ ಕೊರತೆಯನ್ನು ನೀಗಿಸಿದ್ದಾರೆ. ನಾವೆಲ್ಲಾ ಇನ್ನಷ್ಟು ಪಕ್ಷ ಸಂಘಟಿಸುವ ಮೂಲಕ ಇಡೀ ರಾಜ್ಯದಲ್ಲೇ ಬಿಜೆಪಿ ಅಲೆಯನ್ನು ಸೃಷ್ಟಿಸಬೇಕು ಎಂದರು.
ಈ ಸಂದರ್ಭ ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಕಾರ್ಯದರ್ಶಿ ಮೋಹನ್ ಪಕಳ, ಬಿಜೆಪಿ ಪ್ರಮುಖರಾದ ಎನ್. ಉಮೇಶ್ ಶೆಣೈ, ಜಯಂತ ಪೊರೋಳಿ, ರಾಮಚಂದ್ರ ಪೂಜಾರಿ, ಪ್ರಸಾದ್ ಬಂಡಾರಿ, ಉಷಾ ಮುಳಿಯ, ಧನಂಜಯ ನಟ್ಟಿಬೈಲು, ವಿಶ್ವನಾಥ ಶೆಟ್ಟಿ ಕಂಗ್ವೆ, ಚಂದ್ರಶೇಖರ ಮಡಿವಾಳ, ಸುಜಾತ ರೈ ಅಲಿಮಾರ್, ಹರೀಶ್ ಡಿ., ಗಂಗಾಧರ ಪಿ.ಎನ್., ಚಂದ್ರಶೇಖರ ಮಡಿವಾಳ, ರಾಜೇಶ್ ಕೊಡಂಗೆ, ಶರತ್ ಕೋಟೆ, ನೀಲಯ್ಯ ಗೌಡ, ರುಕ್ಮಿಣಿ, ರಮೇಶ್ ಸುಭಾಶ್‌ನಗರ, ಗಂಗಾಧರ ಟೈಲರ್ ಮತ್ತಿತರರು ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ಸಂಚಾಲಕ ಪ್ರಸಾದ್ ಬಂಡಾರಿ ಸ್ವಾಗತಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಧನಂಜಯ ವಂದಿಸಿದರು.