ರೆಂಜ ಶ್ರೀ ಅಯ್ಯಪ್ಪ ಭಜನಾ ಮಂದಿರ ವಾರ್ಷಿಕ ಮಹಾಸಭೆ

0

ಗೌರವಾಧ್ಯಕ್ಷ : ಕರುಣಾಕರ ಶೆಟ್ಟಿ, ಸಂಚಾಲಕ: ಕೃಷ್ಣಪ್ಪ ಗುರುಸ್ವಾಮಿ,ಅಧ್ಯಕ್ಷ: ರವಿನಾಥ ಕೋನಡ್ಕ, ಕಾರ್ಯದರ್ಶಿ: ತುಷಾರ್‌ ಕಜೆ, ಸಂಘಟನಾ ಕಾರ್ಯದರ್ಶಿ: ಚೇತನ್‌ ರೆಂಜ

ಪುತ್ತೂರು: ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂದಿರದಲ್ಲಿ ನಡೆಯಿತು. ಇದೇ ವೇಳೆ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷರಾಗಿ ರವಿನಾಥ ಕೋನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ತುಷಾರ್‌ ಕಜೆ, ಕೋಶಾಧಿಕಾರಿಯಾಗಿ ಭವಿತ್‌ ಕೋನಡ್ಕ, ಸಂಚಾಲಕರಾಗಿ ಕೃಷ್ಣಪ್ಪ ಗೌಡ ಗುರುಸ್ವಾಮಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷಯ್‌ ನೀರುಕ್ಕು, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್‌ ರೆಂಜ ಆಯ್ಕೆಯಾದರು.

ಈ ವೇಳೆ ಮಂದಿರದ ಮಾಜಿ ಪದಾಧಿಕಾರಿಗಳು ಮತ್ತು ಸದಸ್ಯರಾದ ಶೇಷಪ್ಪ ರೈ ಮೂರ್ಕಾಜೆ, ಜಯರಾಮ ರೈ ಮೂರ್ಕಾಜೆ, ರಮೇಶ್‌ ಕುಕ್ಕುಪುಣಿ, ಜಯರಾಮ ರೈ ಆನಾಜೆ, ನಾಗರಾಜ್‌ ಕಜೆ, ಉಮೇಶ್‌ ಬಲ್ಲಾಳ್‌, ಶೋಭಾವತಿ ರೆಂಜ, ಶ್ರೇಯಸ್‌, ಪುನೀತ್‌, ಹರೀಶ್‌, ದಿವಿಕ್‌, ತುಷಾರ್‌ ಕಜೆ ಮತ್ತು ಭವಿತ್‌ ಕೋನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here