ಕಾವು:ಅ.22 ರಂದು ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟವು ಪಾಪೆಮಜಲು ಪ್ರೌಢಶಾಲೆಯಲ್ಲಿ ಜರಗಿತು. ಕ್ರೀಡಾಕೂಟದಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಅಂಡರ್ ಹದಿನಾಲ್ಕು ವಯೋಮಾನದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ವೈಯಕ್ತಿಕ ಚಾಂಪಿಯನ್ ಶಿಪ್ ಅನ್ನು ಪಡೆದುಕೊಂಡರು.
ಮಿತೇಶ್ ನಾಯ್ಕ 8ನೇ ತರಗತಿ 600 ಮೀಟರ್, ಪ್ರಥಮ 400 ಮೀಟರ್, ಪ್ರಥಮ200 ಮೀಟರ್ ಪ್ರಥಮ,ರಿಲೇ ಪ್ರಥಮ ಪಡೆದುಕೊಂಡು ವೈಯಕ್ತಿಕ ಚಾಂಪಿಯನ್ ಶಿಪ್ ಅನ್ನು ತಮ್ಮದಾಗಿಸಿಕೊಂಡರು. ಮಯೂಫ್ ಅಬ್ದುಲ್ಲ 8ನೇ ತರಗತಿ ರಿಲೇ ಪ್ರಥಮ ಹೈಜಂಪ್ ದ್ವಿತೀಯ, ಸುದೀನ್ ಯು ರೈ ಎಂಟನೇ ತರಗತಿ ರೀಲೆ ಪ್ರಥಮ , ಹನೂನ್ 8ನೇ ತರಗತಿ ರಿಲೇ ಪ್ರಥಮ, ನಿಹಾಲ್ 10ನೇ ತರಗತಿ 100 ಮೀಟರ್ ಓಟ ದ್ವಿತೀಯ,200 ಮೀಟರ್ ತೃತೀಯ, ಔಫ್ 10ನೇ ತರಗತಿ ಹೈ ಜಂಪ್ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಇವರು ತರಬೇತಿಯನ್ನು ನೀಡಿದ್ದರು.