ಆಲಂಕಾರು: ಆರೋಗ್ಯ ಕೇಂದ್ರದ ವತಿಯಿಂದ ಆಲಂಕಾರಿನಲ್ಲಿ ಉಚಿತ ಆನೆಕಾಲು ರೋಗದ ರಕ್ತಪರೀಕ್ಷೆ ಆಲಂಕಾರು ಗ್ರಾಮದ ಏಂತಡ್ಕ ಹರೀಶ ಮತ್ತು ಕಕ್ವೆ ನವೀನ ರವರ ಮನೆಯಲ್ಲಿ ರಾತ್ರಿ ರಕ್ತ ಪರೀಕ್ಷೆ ನಡೆಯಿತು. ಆನೆಕಾಲು ರೋಗವು ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳು ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇತ್ತಿಚ್ಚೆಗೆ ಜಾರ್ಖಂಡ್, ಅಸ್ಸಾಂ ಹಾಗು ಉಳಿದ ರಾಜ್ಯದವರು ನಮ್ಮ ಊರಿಗೆ ಬರುತ್ತಿದ್ದು, ಅವರಲ್ಲಿ ಈ ರೋಗದ ಲಕ್ಷಣಗಳು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯವರು ಮುನ್ನೆಚ್ಚರಿಕ ಕ್ರಮವಾಗಿ ಉಚಿತವಾಗಿ ರಕ್ತಪರೀಕ್ಷೆ ಮಾಡಿಸುತ್ತಿದ್ದಾರೆ.
ಆನೆಕಾಲು ರೋಗವನ್ನು ಪತ್ತೆ ಹಚ್ಚಲು ರಾತ್ರಿ 8:30ರಿಂದ ಮಧ್ಯರಾತ್ರಿ 12:00ರವರೆಗೆ ರಕ್ತ ಲೇಖನಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು. ಉಳಿದ ಸಮಯದಲ್ಲಿ ಈ ಜಂತುಗಳು ಲಿಂಪ್ ಗ್ಲಾಂಡ್ ಮತ್ತು ಲಿಂಫ್ ನೋಡ್ ದುಗ್ಥಗ್ರಂಥಿ ಮತ್ತು ನಾಳಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಆರೋಗ್ಯ ಕೇಂದ್ರದವರು ರಕ್ತ ಪರೀಕ್ಷೆ ಮಾಡಿ ಜನರ ಆರೋಗ್ಯ ಕಾಪಾಡುತ್ತಿರುವುದು ಆರೋಗ್ಯ ಕೇಂದ್ರದ ಸಿಬ್ಬಂದಿರವರ ಶ್ಲಾಘನೀಯ ಕೆಲಸವಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸರೋಜಿನಿ, ಸಿ.ಎಚ್.ಓ ಬಿನ್ಸಿತೋಮಸ್, ಎಲ್.ಎಚ್.ವಿ ಮರಿಯಮ್ಮ, ಲ್ಯಾಬ್ ಟೆಕ್ನ್ ನೇಶಿಯನ್ ಯಶ್ ರಾಜ್, ರವಿಶಂಕರ್ ಎಚ್.ಐ.ಓ, ರಮ್ಯಾ ಸಿ.ಎಚ್.ಓ, ಆಶಾ ಕಾರ್ಯಕರ್ತೆಯರಾದ ತಾರಾ.ಬಿ,ಪ್ರೇಮ ಎನ್, ಡೀಕಮ್ಮ, ಮೀನಾಕ್ಷಿ ಯವರು ಸಹಕರಿಸಿದರು. ಗ್ರಾ.ಪಂ ಅಧ್ಯಕ್ಷರಾದ ಸುಶೀಲ, ಉಪಾಧ್ಯಕ್ಷರಾದ ರವಿ ಪೂಜಾರಿ ಸೇರಿದಂತೆ ಗ್ರಾ.ಪಂ ಸದಸ್ಯರು ಸೇರಿದಂತೆ ಒಟ್ಟು 121 ಮಂದಿಯ ರಕ್ತ ಮಾದರಿ ಸಂಗ್ರಹಿಸಲಾಯಿತು. ಇನ್ನೂ ನ.13ರಂದು ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ರಾತ್ರಿ 8 ಗಂಟೆಯಿಂದ 12 ಗಂಟೆಯ ತನಕ ರಕ್ತ ಮಾದರಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.