ನಿಡ್ಪಳ್ಳಿ; ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಯವರು ಅ.28 ರಂದು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಸಂದರ್ಭದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು ರೂ.7710 ಹಾಗೂ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳಾದ ಎ.ಅರ್.ಎಸೈ ಯೋಗೀಶ್,ರಾಧಾಕೃಷ್ಣ, ಪ್ರವೀಣ್ ರೈ, ಜಯಶ್ರೀ, ದೇವೇಂದ್ರ, ಭೀಮನಗೌಡ ಬಿರಾದರ್, ಅಸ್ತಮ್ ಯುವರಾಜ್ ಅವರ ತಂಡ ದಾಳಿ ನಡೆಸಿದೆ.
ಪ್ರಕರಣದ ಕುರಿತು ನ್ಯಾಯಾಧೀಶರಿಗೆ ವರದಿ ನೀಡಿದ್ದು, ಅವರ ಆದೇಶದಂತೆ ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.