ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರಿಗಾಗಿ ಒಂದು ದಿನ

0

ಪುತ್ತೂರು : ಪುತ್ತೂರು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.26ರಂದು ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಪ್ರತೀ ವರ್ಷದಂತೆ, ಶಾಲಾ ಮೇಲಿನ ವಿಶ್ವಾಸದಿಂದ ಶಾಲೆಗೆ ಸಹಕರಿಸುವ ಶಾಲಾ ಮಕ್ಕಳ ಹೆತ್ತವರಿಗಾಗಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲಾ ಸಂಚಾಲಕ ವಂ. ಲಾರೆನ್ಸ್ ಮಸ್ಕರೇನಸ್‌ ಕಾರ್ಯಕ್ರಮವನ್ನು ವಾಲಿಬಾಲ್ ಆಟದ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

. ಶಾಲಾ ಮಕ್ಕಳ ಹಾಗೂ ಶಿಕ್ಷಕರ ಜೊತೆಯಲ್ಲಿ ಒಂದು ದಿನವನ್ನು ಕಳೆದು, ಕಾರ್‍ಯಕ್ರಮವನ್ನು ಯಶಸ್ವಿಗೊಳಿಸಿದರು.ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜಾ ವಂದಿಸಿದರು. ದೈಹಿಕ ಶಿಕ್ಷಕ ಪದ್ಮನಾಭ ಮತ್ತು ಸಹಶಿಕ್ಷಕರಾದ, ಜಯಶ್ರೀ, ವಿಲ್ಮಾ, ರೇಶ್ಮಾ, ಬಬಿತಾ, ತುಳಸಿ, ಸೌಮ್ಯ ಟಿ. ಇವರು ವಿವಿಧ ಸ್ಪರ್ಧೆಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here