ನ.1: ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದಿಂದ 4ನೇ ವರ್ಷದ ಯುವಶಕ್ತಿ ಉತ್ಸವ – 2024

0

ಬಡಗನ್ನೂರು:  ಯುವ ಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ) ಸುಳ್ಯಪದವು ಇದರ ವತಿಯಿಂದ 4 ವರ್ಷದ  ಯುವಶಕ್ತಿ ಉತ್ಸವ – 2024 ಕಾರ್ಯಕ್ರಮ  ಸುಳ್ಯಪದವು ಸವೋದಯದ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ  ನ.1 ರಂದು  ನಡೆಯಲಿದೆ.

ನ.1 ರಂದು ಪೂರ್ವಾಹ್ನ  ಗಂ 9:45  ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಸುಳ್ಯಪದವು ಶ್ರೀ ಬಾ. ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯಗುರು ಪ್ರೇಮಾ ಕಲ್ಲೂರಾಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವಾಧ್ಯಕ್ಷ ವಿನಯ ಬೋಳುಗುಡ್ಡೆ ರವರ  ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಅಶೋಕ್ ಕುಮಾರ್ ರೈ, ಕೋಡಿಂಬಾಡಿ,  ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿ,ಅಧ್ಯಕ್ಷ  ಶ್ರೀನಿವಾಸ ಭಟ್  ಚಂದುಕೂಡ್ಲು, ಸುಳ್ಯಪದವು  ಸರ್ವೋದಯ  ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಿವರಾಮ ಹೆಚ್. ಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.),ನ ಹಿರಿಯ ಸದಸ್ಯ ಅಣ್ಣು ಮೂಲ್ಯ ಸುಳ್ಯಪದವು ಭಾಗವಹಿಸಲಿದ್ದಾರೆ.

ಗುರುವಂದನಾ ಕಾರ್ಯಕ್ರಮ:-
ಸುಳ್ಯಪದವು ಸರ್ವೋದಯ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸತ್ಯಶಂಕರ ಭಟ್ ರವರೆಗೆ ಗುರುವಂದನಾ ಕಾರ್ಯಕ್ರಮ ನಡೆಯಲಿರುವುದು.

ಸನ್ಮಾನ ಕಾರ್ಯಕ್ರಮ;-
ಬೆಂಗಳೂರು, ನಿವೃತ್ತ ಪೊಲೀಸ್ ಸೂಪರಿಂಟೆಂಡೆಂಟ್ ಭಾಸ್ಕರ್ ವಿ. ಬಿ. ರವರೆಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಪ್ರತಿಭಾ ಪುರಸ್ಕಾರ:-
ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಕ್ಷೇತ್ರದಲ್ಲಿ  ಸಾಧನೆ ಮಾಡಿದ ಕು। ಅಮೃತ ಕೆ. ಕಾಯರ್‌ಪದವು, ಹಾಗೂ ಕು| ದೃಶ್ಯ ಕೆ. ವಿ. ಕನ್ನಡ್ಕ  ಹಾಗೂ  2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ನಮ್ಮ ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ವಿವಿಧ ಸ್ಪರ್ಧೆಗಳು;-
ಪೂರ್ವಾಹ್ನ   ಗಂ 10:30 ರಿಂದ ಪಡುವನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಬೆಳ್ಳೂರು ಪಂಚಾಯತ್‌ಗೆ ಒಳಪಟ್ಟ ಅಂಗನವಾಡಿ ಮಕ್ಕಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿರುವುದು.

ಅಂಗನವಾಡಿ ವಿಭಾಗ :
25 ಮೀಟರ್ ಓಟ, ಕಾಳು ಹೆಕ್ಕುವುದು, ಕಪ್ಪೆ ಜಿಗಿತ (ಭಾಗವಹಿಸಿದ ಎಲ್ಲಾ ಅಂಗನವಾಡಿ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.)
1ರಿಂದ 4ನೇ ತರಗತಿ :
ಅದೃಷ್ಟದ ಆಟ, ಆಕಾಶ ಭೂಮಿ ಪಾತಾಳ, ವಿಷ ಚೆಂಡು
5ರಿಂದ 7ನೇ ತರಗತಿ :
ಲಿಂಬೆ ಚಮಚ ಓಟ, ಆಕಾಶ ಭೂಮಿ ಪಾತಾಳ, ಪಿರಮಿಡ್ ರಚನೆ ರಾಮ ರಾವಣ (ಗುಂಪು ಸ್ಪರ್ಧೆ ಬಾಲಕ-ಬಾಲಕಿಯರಿಗೆ ಪ್ರತ್ಯೇಕ).
8ರಿಂದ 10ನೇ ತರಗತಿ :
ಪಿರಮಿಡ್ ರಚನೆ, ಅದೃಷ್ಟದ ಅಕ್ಷರ, ಬಾಲ್ ಎಸೆತ (ಬಾಲಕ-ಬಾಲಕಿಯರಿಗೆ ಪ್ರತ್ಯೇಕ) ವಾಲಿಬಾಲ್ (ಪ್ರೌಢಶಾಲಾ ಬಾಲಕರಿಗೆ ಮಾತ್ರ) ತ್ರೋಬಾಲ್ (ಪ್ರೌಢಶಾಲಾ ಬಾಲಕಿಯರಿಗೆ ಮಾತ್ರ) (ಸ್ಥಳದಲ್ಲೇ ತಂಡಗಳ ರಚನೆ)
ಸಾರ್ವಜನಿಕ ಮಹಿಳೆಯರಿಗೆ:
ಬಾಲ್ ಎಸೆತ, ಅದೃಷ್ಟದ ಆಟ, ಬಾಟಲಿಗೆ ನೀರು ತುಂಬಿಸುವುದು ತ್ರೋಬಾಲ್ (ಸ್ಥಳದಲ್ಲೇ ತಂಡಗಳ ರಚನೆ)
ಸಾರ್ವಜನಿಕ ಪುರುಷರಿಗೆ : ಕಪ್ಪೆ ಜಿಗಿತ, ಗೋಣಿಚೀಲ ಓಟ, ನಿಧಾನ ಬೈಕ್ ಸವಾರಿ, 100 ಮೀ. ಓಟ
45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ : ಅದೃಷ್ಟದ ಆಟ, ಗುಂಡೆಸೆತ, ಸಂಗೀತ ಕುರ್ಚಿ
50 ವರ್ಷ ಮೇಲ್ಪಟ್ಟ ಪುರುಷರಿಗೆ : ಗುಂಡೆಸೆತ, ಉದ್ದ ಜಿಗಿತ, ಸಂಗೀತ ಕುರ್ಚಿ. ಸ್ಪರ್ಧೆ ನಡೆಯಲಿದೆ.

ಅಪರಾಹ್ನ  ಗಂ 3 ರಿಂದ  ಕಬಡ್ಡಿ ಪಂದ್ಯಾಕೂಟದ ಉದ್ಘಾಟನಾ ಸಮಾರಂಭ ಹಾಗೂ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವು ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.) ದ ಅಧ್ಯಕ್ಷ ಗುರುಕಿರಣ್ ರೈ ಎನ್. ಜಿ. ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪುತ್ತೂರು, ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ದಾಮೋದರ ಕುಲಾಲ್  ಕಬಡ್ಡಿ ಪಂದ್ಯಾಕೂಟದ ಉದ್ಘಾಟನೆ ಮಾಡಲಿದ್ದಾರೆ.ಪಂಜ ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ ಸಬ್ರಾಕಜೆ ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ, (Bangalore, Anthem Biosciences Pvt. Ltd., ) ಮ್ಯಾನೇಜರ್ ಉದಯಶಂಕರ್ ಗುತ್ಯಡ್ಕ,ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆ ಸಂಚಾಲಕ ಮಹದೇವ ಭಟ್ ಕೊಲ್ಯ, ಸುಳ್ಯಪದವು ಸರ್ವೋದಯ ಪ್ರೌಢಶಾಲಾ ಮುಖ್ಯಗುರು ಸುಖೇಶ್ ರೈ ರಾಷ್ಟ್ರೀಯ ವಾಲಿಬಾಲ್ ಆಟಗಾರ( BSNL)ಗಣೇಶ್ ರೈ ಮುಂಡಾಸು,ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಉಪಾಧ್ಯಕ್ಷ  ರೂಪೇಶ್ ಮರದಮೂಲೆ,  ಹಾಗೂ ಹಿರಿಯ ಸದಸ್ಯ ಶ್ರೀಧರ ಕಾಯರ್‌ಪದವು ಭಾಗವಹಿಸಲಿದ್ದಾರೆ.

ಮಹಿಳಾ ಕಬಡ್ಡಿ ಪಂದ್ಯಾಟ ;-
ಅಪರಾಹ್ನ ಗಂ 3 ರಿಂದ  ಮ್ಯಾಟ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾಕೂಟ ನಡೆಯಲಿದೆ
ಪ್ರಥಮ ನಗದು : ರೂ. 3,333-00 ಹಾಗೂ ಯುವಶಕ್ತಿ ಟ್ರೋಫಿ.
ದ್ವಿತೀಯ ನಗದು : ರೂ. 2,222-00 ಹಾಗೂ ಯುವಶಕ್ತಿ ಟ್ರೋಫಿ ಹಾಗೂ ಉತ್ತಮ ದಾಳಿಗಾರ್ತಿ, 
ಉತ್ತಮ ಹಿಡಿತಗಾರ್ತಿ, ಹಾಗೂ ಸರ್ವಾಂಗೀಣ ಆಟಗಾರ್ತಿ  ವೈಯಕ್ತಿಕ ಬಹುಮಾನ ನೀಡಲಾಗುವುದು . 

ಹೊನಲು ಬೆಳಕಿನ ಮ್ಯಾಟ್ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಕೂಟ :-
ಸಂಜೆ ಗಂ 4 ರಿಂದ ಹೊನಲು ಬೆಳಕಿನ ಮ್ಯಾಟ್ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಕೂಟ ನಡೆಯಲಿದ್ದು ಪ್ರಥಮ ನಗದು ರೂ. 10,111-00 ಹಾಗೂ ಯುವಶಕ್ತಿ ಟ್ರೋಫಿ,  ದ್ವಿತೀಯ ನಗದು  ರೂ. 7,111-00 ಹಾಗೂ ಯುವಶಕ್ತಿ ಟ್ರೋಫಿ,
ತೃತೀಯ ನಗದು : ರೂ. 5.111-00 ಹಾಗೂ ಯುವಶಕ್ತಿ ಟ್ರೋಫಿ. ಚತುರ್ಥ ನಗದು ರೂ. 3,111-00 ಹಾಗೂ ಯುವಶಕ್ತಿ ಟ್ರೋಫಿ

ವೈಯಕ್ತಿಕ ಬಹುಮಾನ :
ಉತ್ತಮ ದಾಳಿಗಾರ , ಸರ್ವಾಂಗೀಣ ಆಟಗಾರ ,ಉತ್ತಮ ಹಿಡಿತಗಾರ ವೈಯಕ್ತಿಕ ಬಹುಮಾನ ನೀಡಲಾಗುವುದು 

ದೀಪಾವಳಿ ಪ್ರಯುಕ್ತ ರಾತ್ರಿ  ಗಂ 8:30  ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ:-
ಸಮಾರೋಪ ಸಮಾರಂಭವು  ಸುಳ್ಯಪದವು, ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.), ದ ಗೌರವ ಸಲಹೆಗಾರ  ಸತೀಶ್ ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಮುಖ್ಯ ಅತಿಥಿಗಳಾಗಿ,  ಬೆಂಗಳೂರು  ಶ್ರೀ  ಶ್ರೀವೆಂಕಟೇಶ್ವರ ಪವರ್ ಸೊಲ್ಯೂಷನ್ಸ್, ನ  ಸತ್ಯಾನಂದ ಎನ್. ನಿಡಿಯಡ್ಕ, ಮಂಗಳೂರು ಸಾಯಿ ನೆರವು ಟ್ರಸ್ಟ್ (ರಿ.), ಅಧ್ಯಕ್ಷಕಿಶೋರ್ ಮಂಚಿ, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ.,ಸುಳ್ಯಪದವು ಶ್ರೀ ಮಂಜುನಾಥ ರೋಡ್ ಲೈನ್ಸ್, ಮ್ಹಾಲಕ  ರವಿಶಂಕರ್ ಯಾದವ್ ಭಾಗವಹಿಸಿದ್ದಾರೆ.ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.), ಕಾರ್ಯದರ್ಶಿ  ರಾಜೇಶ್ ಎಸ್, ಕೋಶಾಧಿಕಾರಿ ಹ್ಯಾರಿಸ್ ಸುಳ್ಯಪದವು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.

ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್ಸ್,  ಮ್ಹಾಲಕ  ಜನಾರ್ಧನ ಪೂಜಾರಿ ಪದಡ್ಕ, ಬಹುಮಾನ ವಿತರಣೆ ಮಾಡಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here