ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ‘ಆಫರ್’ ಮೆರುಗು

0

ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುವ, ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವ ದೀಪಾವಳಿ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಪೂರ್ವಕಾಲದ ದೀಪಾವಳಿ ಆಚರಣೆಗೂ ಆಧುನಿಕ ದೀಪಾವಳಿ ಆಚರಣೆಗೂ ತುಂಬ ವ್ಯತ್ಯಾಸ ಇದೆಯಾದರೂ ದೀಪಾವಳಿ ಸಂದರ್ಭಕ್ಕೆ ಜನತೆ ಅಣಿಯಾಗುವ ರೀತಿ ಮಾತ್ರ ಇಂದಿಗೂ ಅಪೂರ್ವವಾಗಿಯೇ ಇದೆ.

ದೀಪಾವಳಿಯೆಂದರೆ ಪ್ರತೀ ಮನೆ, ಮನಗಳಲ್ಲಿ ಹಬ್ಬದ ಸಂಭ್ರಮ. ತುಳು ನಾಡಿನಲ್ಲಂತೂ ದೀಪಾವಳಿ ಬಂತೆಂದರೆ ಅದರ ಮೆರುಗು ಇನ್ನೂ ಹೆಚ್ಚು. ಇವೆಲ್ಲವುಗಳ ಜೊತೆಗೆ ದೀಪಾವಳಿ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಇನ್ನೊಂದು ರೀತಿಯ ಖುಷಿ. ವರ್ಷದಲ್ಲಿ ಯಾವ ಸಂದರ್ಭದಲ್ಲಿ ಗ್ರಾಹಕರಿಗೆ ಆಫರ್ ನೀಡದಿದ್ದರೂ ದೀಪಾವಳಿಗೆ ಭರ್ಜರಿ ಆಫರ್ ಕಟ್ಟಿಟ್ಟ ಬುತ್ತಿ. ವಾಹನ ಮಾರಾಟದ ಶೋರೂಂನಿಂದ ಹಿಡಿದು, ವಸ್ತ್ರ ಮಳಿಗೆ, ಮೊಬೈಲ್ ಶಾಪ್‌ಗಳು, ಚಿನ್ನದ ಮಳಿಗೆಗಳು, ಸೂಪರ್ ಮಾರ್ಕೆಟ್‌ಗಳು, ಎಲೆಕ್ಟ್ರೋನಿಕ್ಸ್ ಮಳಿಗೆಗಳು, ಫರ್ನಿಚರ‍್ಸ್ ಶಾಪ್‌ಗಳು…ಹೀಗೇ ನಾನಾ ಮಳಿಗೆಯವರು ಆಕರ್ಷಕ ಆಫರ್‌ಗಳನ್ನು ನೀಡಿ ಗ್ರಾಹಕರಿಗೂ ಸಾಮಾಗ್ರಿ/ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶ ಮಾಡಿಕೊಡುತ್ತಾರೆ. ಆಫರ್ ನೀಡುವ ಬಹುತೇಕ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ.

ದೀಪಾವಳಿ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಭರಪೂರ ವ್ಯಾಪಾರದ ಖುಷಿಯಾದರೆ ಗ್ರಾಹಕರಿಗೆ ರಿಯಾಯಿತಿ ದರಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಕೊಂಡುಕೊಂಡ ಖುಷಿ. ಒಟ್ಟಿನಲ್ಲಿ ದೀಪಾವಳಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ. ಈ ದೀಪಾವಳಿ ಮನೆ, ಮನ ಬೆಳಗಲಿ, ಎಲ್ಲರ ಮನಸ್ಸುಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಲಿ ಎಂಬುವುದೇ ಆಶಯ.

LEAVE A REPLY

Please enter your comment!
Please enter your name here