





ಪುತ್ತೂರು: ಕಳೆದ 27 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದ ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ್ಸ್ 28ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ನ.1ರಂದು ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮಿ ಪೂಜೆ ನಡೆಯಿತು.



ಬೆಳಿಗ್ಗೆ ವೈದಿಕ ಹರಿಪ್ರಸಾದ್ ಭಟ್ ಕೆದಿಲರವರ ಪೌರೋಹಿತ್ಯದಲ್ಲಿ ಶ್ರೀ ಧನಲಕ್ಷ್ಮೀ ಪೂಜೆ, ಪ್ರಸಾದ ವಿತರಣೆ ನಡೆಯಿತು.ಹಲವಾರು ಗ್ರಾಹಕರು, ಹಿತೈಷಿಗಳು, ಸಮಾಜ ಭಾಂಧವರು ಹಾಗೂ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಾಜ್’ಶೇಖರ್ ಆಚಾರ್ಯ, ಪತ್ನಿ ರೇಖಾ ರಾಜ್’ಶೇಖರ್ ಆಚಾರ್ಯ, ಪುತ್ರ ರೂಪಕ್ ಆಚಾರ್ಯ ಅತಿಥಿಗಳನ್ನು ಸತ್ಕರಿಸಿದರು. ಮನೀಷ್,ಮನ್ವಿತ್,ಉಮೇಶ್, ಸುಕ್ಷಿತ್,ಪವನ್,ಸುಹಾನ್,ಸುಧಾಕರ, ಪ್ರವೀಣ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಸ್ವಾತಿ, ತೇಜಸ್ವಿ, ಅನ್ನಪೂರ್ಣ ಸಹಕರಿಸಿದರು.













