ಆಲಂಕಾರು: ಇಲ್ಲಿನ ದೇವಿಪ್ರಸಾದ್ ಕಾಂಪ್ಲೆಕ್ಸ್ನಲ್ಲಿ ಕಳೆದ 7 ವರ್ಷಗಳಿಂದ ವ್ಯವಹರಿಸುತ್ತಿದ್ದ ಅಕ್ಷರ ಪ್ರಿಂಟರ್ಸ್ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪವಿರುವ ಲಕ್ಷ್ಮಿರಾಮ ಕಾಂಪ್ಲೆಕ್ಸ್ಗೆ ಸ್ಥಳಾಂತರ ಹಾಗೂ ಇದರ ಪಕ್ಕದಲ್ಲೇ ಇರುವ ಜಿ.ಎಲ್.ಕಾಂಪ್ಲೆಕ್ಸ್ನಲ್ಲಿ ಧನ್ವಿ ಕಿಡ್ಸ್ ಕೇರ್ ಮಾರ್ಟ್ ಅ.31ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ರಾಘವೇಂದ್ರ ಪ್ರಸಾದ್ ತೋಟಂತಿಲ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಧನ್ವಿ ಕಿಡ್ಸ್ ಕೇರ್ ಮಾರ್ಟ್ ಹಾಗೂ ಅಕ್ಷರ ಪ್ರಿಂಟರ್ಸ್ ಅನ್ನು ಮಾಲಕರ ತಂದೆ ವೆಂಕಪ್ಪ ಗೌಡ ಹಾಗೂ ತಾಯಿ ಶ್ರೀಮತಿ ಮೋಹನಾಂಗಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳಾಗಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಅವರು ಮಾತನಾಡಿ, ಇತ್ತೀಚಿನ ದಿನದಲ್ಲಿ ಆಲಂಕಾರು ಪೇಟೆ ವೇಗವಾಗಿ ಬೆಳೆಯುತ್ತಿದ್ದು ಹೊಸ ಹೊಸ ಉದ್ದಿಮೆಗಳೂ ಬರುತ್ತಿವೆ. ಆಲಂಕಾರು ಪೇಟೆಗೆ ಶೋಭೆಯಂತೆ ಲಕ್ಷ್ಮಿರಾಮ ಕಾಂಪ್ಲೆಕ್ಸ್ ಹಾಗೂ ಜಿ.ಎಲ್.ಕಾಂಪ್ಲೆಕ್ಸ್ ಕಂಗೊಳಿಸುತ್ತಿದೆ. ಈ ಕಟ್ಟಡದಲ್ಲಿ ಆರಂಭಗೊಂಡಿರುವ ಧನ್ವಿ ಕಿಡ್ಸ್ ಕೇರ್ ಮಾರ್ಟ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬೆಳೆಯಲಿ. ಅದೇ ರೀತಿ ಆಲಂಕಾರು ಪೇಟೆಯಲ್ಲಿ 7 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿರುವ ಅಕ್ಷರ ಪ್ರಿಂಟರ್ಸ್ ಲಕ್ಷ್ಮಿರಾಮ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡಿದ್ದು ಇವರಿಂದ ಜನರಿಗೆ ಇನ್ನಷ್ಟೂ ಹೆಚ್ಚಿನ ಸೇವೆ ಸಿಗಲಿ. ಎರಡೂ ಸಂಸ್ಥೆಗಳೂ ದೇವರ ಅನುಗ್ರಹದಿಂದ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿ ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರು ಮಾತನಾಡಿ, ಯುವಕರು ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಹೋದರರಿಬ್ಬರು ಆಲಂಕಾರಿನಲ್ಲಿ ಧನ್ವಿ ಕಿಡ್ಸ್ ಕೇರ್ ಮಾರ್ಟ್ ಹಾಗೂ ಅಕ್ಷರ ಪ್ರಿಂಟರ್ಸ್ ಆರಂಭಿಸುವ ಮೂಲಕ ಎಲ್ಲಾ ಯುವಕರಿಗೆ ಮಾದರಿ ಆಗಿದ್ದಾರೆ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಮಾತನಾಡಿ, ಕೃಷಿ ಕುಟುಂಬದ ಸಹೋದರರಾದ ದಿನೇಶ್ ಹಾಗೂ ಜಗದೀಶ್ ಅವರು ಪರಿಶ್ರಮದಿಂದ ಉದ್ದಿಮೆ ಆರಂಭಿಸಿದ್ದಾರೆ. ಇಬ್ಬರಿಗೂ ಇನ್ನಷ್ಟೂ ಯಶಸ್ಸು ಸಿಗಲಿ. ಇವರಿಂದ ಆಲಂಕಾರು ಪರಿಸರದ ಜನತೆಗೆ ಉತ್ತಮ ಸೇವೆ ಸಿಗಲಿ ಎಂದು ಹಾರೈಸಿದರು. ಲಕ್ಷ್ಮಿರಾಮ ಕಟ್ಟಡದ ಮಾಲಕರಾದ ರಾಮಣ್ಣ ಗೌಡ ದೋಳ ಅವರು ಮಾತನಾಡಿ, ಲಕ್ಷ್ಮಿರಾಮ ಹಾಗೂ ಜಿ.ಎಲ್.ಕಾಂಪ್ಲೆಕ್ಸ್ನಲ್ಲಿ ವಿವಿಧ ಮಳಿಗೆಗಳು ಆರಂಭಗೊಂಡಿದ್ದು ಇನ್ನೂ ಕೆಲವು ಅಂಗಡಿಗಳು ಆರಂಭಗೊಳ್ಳಲಿವೆ. ಈ ಕಟ್ಟಡದಲ್ಲಿ ವ್ಯವಹರಿಸುವ ಎಲ್ಲರಿಗೂ ದೇವರ ಅನುಗ್ರಹದಿಂದ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಅಕ್ಷರ ಪ್ರಿಂಟರ್ಸ್ನ ಮಾಲಕ ಜಗದೀಶ್ ಪಲ್ಲಡ್ಕಪಟ್ಟೆ ಅವರು ಮಾತನಾಡಿ, ಕಳೆದ 7 ವರ್ಷಗಳಿಂದ ಆಲಂಕಾರು ದೇವಿಪ್ರಸಾದ್ ಕಾಂಪ್ಲೆಕ್ಸ್ನಲ್ಲಿದ್ದ ಅಕ್ಷರ ಪ್ರಿಂಟರ್ಸ್ ಲಕ್ಷ್ಮಿರಾಮ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಳಿಸಲಾಗಿದೆ. ಗ್ರಾಹರು ಹಿಂದಿನಂತೆ ನಮ್ಮೊಂದಿಗೆ ಸಹಕರಿಸಬೇಕು. ನಮಲ್ಲಿ ಆಫ್ಸೆಟ್ ಪ್ರಿಂಟಿಂಗ್, ಜೆರಾಕ್ಸ್, ಡಿಜಿಟಲ್ ಕಲರ್ ಪ್ರಿಂಟಿಂಗ್, ಸ್ಪೈರಲ್ ಬೈಂಡಿಂಗ್, ವಿಸಿಟಿಂಗ್ ಕಾರ್ಡ್ಸ್, ಆಮಂತ್ರಣ ಪತ್ರಿಕೆ, ಐ.ಡಿ.ಕಾರ್ಡ್ಸ್, ಲ್ಯಾಮಿನೇಶನ್, ಡಿಜಿಟಲ್ ಬ್ಯಾನರ್, ಫೋಟೋ ಪ್ರೇಮ್, ಸನ್ಮಾನ ಮಾಲೆ, ಶಾಲು,ಸ್ಮರಣಿಕೆ ಇತ್ಯಾದಿ ಲಭ್ಯವಿದೆ ಎಂದು ಹೇಳಿ ಸಹಕಾರ ಕೋರಿದರು.
ಧನ್ವಿ ಕಿಡ್ಸ್ ಕೇರ್ ಮಾರ್ಟ್ನ ಮಾಲಕಿ ಉಷಾದಿನೇಶ್ ಪಲ್ಲಡ್ಕಪಟ್ಟೆ ಅವರು ಮಾತನಾಡಿ, ನಮ್ಮಲ್ಲಿ ಸೊನ್ನೆಯಿಂದ ಆರು ವರ್ಷದ ವರೆಗಿನ ಮಕ್ಕಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳು ಲಭ್ಯವಿದೆ ಎಂದು ಹೇಳಿ ಸಹಕಾರ ಕೋರಿದರು. ಸುಧೀಶ್ ಪಲ್ಲಡ್ಕಪಟ್ಟೆ ಸ್ವಾಗತಿಸಿ, ನಿರೂಪಿಸಿದರು.
ಪುತ್ತೂರು ಎಸ್ಆರ್ಕೆ ಲ್ಯಾಡರ್ಸ್ನ ಕೇಶವ ಅಮೈ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮನೋಹರ, ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ ಪಜ್ಜಡ್ಕ, ನಿರ್ದೇಶಕರು, ಸಿಬ್ಬಂದಿಗಳು, ಆಲಂಕಾರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವಣ್ಣ ಗೌಡ, ತಿಮ್ಮಪ್ಪ ಗೌಡ ಕುಂಡಡ್ಕ, ಶಿಕ್ಷಕರಾದ ನಿಂಗರಾಜು, ಪ್ರದೀಪ್ ಬಾಕಿಲ, ಲಕ್ಷ್ಮಿರಾಮಣ್ಣ ಗೌಡ ದೋಳ, ಆಲಂಕಾರು ಮೆಸ್ಕಾಂ ಜೆಇ ಪ್ರೇಮ್ಕುಮಾರ್, ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಕುಂಞಲಡ್ಡ, ಜಿ.ಎಲ್.ಕಾಂಪ್ಲೆಕ್ಸ್ ಮಾಲಕ ಗೋಪಣ್ಣ ಗೌಡ ದೋಳ, ಧವಳಗಿರಿ ಕನ್ಸ್ಟ್ರಕ್ಷನ್ನ ಮನೋಹರ ಮತ್ತಿತರರು ಭೇಟಿ ನೀಡಿ ಶುಭಹಾರೈಸಿದರು.
ಪಲ್ಲಡ್ಕಪಟ್ಟೆ ಮನೆಯವರಾದ ಶ್ರಾವ್ಯಜಗದೀಶ್, ಮಾ| ಜಶ್ವಿನ್ ಪಿ., ಮಾ| ಧನ್ವಿಶ್ ಪಿ., ಭರತೇಶ್ ಪಿ., ಶೋಭಾ ಭರತೇಶ್, ಬೇಬಿ ತನ್ವಿಕಾ, ಬೇಬಿ ತಶ್ವಿಕಾ, ಕು.ಯತಿಶ್ರೀ ಪಿ. ಮತ್ತಿತರರು ಉಪಸ್ಥಿತರಿದ್ದರು.