ನೆಲ್ಯಾಡಿ: ಇಲ್ಲಿಗೆ ಸಮೀಪದ ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿ’ಸೋಜ (75ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.4ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪ್ರಗತಿಪರ ಕೃಷಿಕರಾಗಿದ್ದರು. ಕೃಷಿ ಇಲಾಖೆ ವತಿಯಿಂದ ನೀಡುವ ಆತ್ಮ ಯೋಜನೆಯಡಿ ಹೈನುಗಾರಿಕೆ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 2017-18ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದುಕೊಂಡಿದ್ದಾರೆ. ಕೊಕ್ಕಡ ಸಂತ ಜೋನರ ದೇವಾಲಯದ ವಾಳ್ಯದ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ದುಲ್ಸಿನ್ ಫೆರಾವೊ, ಮಕ್ಕಳಾದ ಲೂಯಿಸ್, ಗ್ರೆಗರಿ, ಪ್ರಸನ್ನ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.