ನಿಡ್ಪಳ್ಳಿ: ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು ಇವರ ಆಶ್ರಯದಲ್ಲಿ 2024- 25 ನೇ ಸಾಲಿನ ಪರಿಶಿಷ್ಟ ಪಂಗಡ ಯೋಜನೆ ಅನುಷ್ಠಾನ ಕಾರ್ಯಕ್ರಮದಡಿಯಲ್ಲಿ ರೈತರಿಗೆ ತೋಟಗಾರಿಕೆ ಬೆಳೆ ಹಾಗೂ ಅಲಸಂಡೆ ಬೆಳೆಯ ಸಮಗ್ರ ನಿರ್ವಹಣೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಬೋರ್ಡೋ ದ್ರಾವಣವನ್ನು ತಯಾರಿಸುವ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಬೆಟ್ಟಂಪಾಡಿ ಗ್ರಾಮದ ಪ್ರಗತಿಪರ ಕೃಷಿಕರಾದ ಅನಿತಾ ಕುವೆಂಜ ರವರ ತೋಟದಲ್ಲಿ ನ.9 ರಂದು ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ ಜಿ ರಮೇಶ ರವರು ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬೇಸಾಯ ಶಾಸ್ತ್ರದ ವಿಜ್ಞಾನಿಗಳಾದ ಹರೀಶ್ ಶೆಣೈ ರವರು ಅಲಸಂಡೆ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೇದಾರನಾಥ ವೈಜ್ಞಾನಿಕ ಬೋರ್ಡೋ ದ್ರಾವಣ ತಯಾರಿಕೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮೀನು ವಿಜ್ಞಾನಿ ಡಾ. ರವೀಂದ್ರಗೌಡ ಪಾಟೀಲ್, ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.ಬೋರ್ಡೊ ದ್ರಾವಣ ತಯಾರಿಸಲು ಸುಮಾರು ಹತ್ತು ಫಲಾನುಭವಿಗಳಿಗೆ ಡ್ರಮ್ ಗಳನ್ನು ಉಚಿತವಾಗಿ ವಿತರಿಸಲಾಯಿತು.