ಕಾವು ವಿಶ್ವ ಹಿಂದೂ ಪರಿಷತ್ ಬಜರಂಗದಳ, ಗೋಪೂಜಾ ಸಮಿತಿಯಿಂದ ಸಾಮೂಹಿಕ ಗೋಪೂಜೆ-ಧಾರ್ಮಿಕ ಸಭೆ,ಭಜನಾ ಕಾರ್ಯಕ್ರಮ, ಕುಸಲ್ಡೊಂತೆ ಅಸಲ್ ಹಾಸ್ಯ ಕಾರ್ಯಕ್ರಮ

0

ಕಾವು:ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 13 ನೇ ವರ್ಷದ ಸಾಮೂಹಿಕ ಗೋಪೂಜೆ, ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನ.10 ರಂದು ನಡೆಯಿತು.


ಸಾಮೂಹಿಕ ಗೋಪೂಜೆ
ಸಂಜೆ ಗಂಟೆ 6.30 ಕ್ಕೆ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮ
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆನ್ನು ಗೋಪೂಜಾ ಸಮಿತಿ ಕಾವು ಇದರ ಅಧ್ಯಕ್ಷರಾದ ನಹುಷ ಭಟ್ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು .ವಿಶ್ವ ಹಿಂದೂ ಪರಿಷತ್ ಕಾವು ಘಟಕದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಸೀತಾರಾಮ ಬಾಳೆಕೊಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸ್ನೇಹ ಮತ್ತು ತಂಡದವರು ಪ್ರಾರ್ಥಿಸಿದರು. ಗೋಪೂಜೆ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಾವು ವಂದಿಸಿದರು. ಭವಿಷತ್ ಹಸಂತಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಕಿರಣ್ ಕುಮಾರ್ ಮಾಣಿಯಡ್ಕ, ವಿಶ್ವನಾಥ ಬಾಳೆಕೊಚ್ಚಿ,ಸುಪ್ರೀತ್ ಹೊಸಮನೆ, ಅಶ್ವಥ್ ಹೊಸಮನೆ ಶಾಲು ಹಾಕಿ ಸ್ವಾಗತಿಸಿದರು.


ಸನ್ಮಾನ ಕಾರ್ಯಕ್ರಮ
13 ವರ್ಷಗಳಿಂದ ಹಮ್ಮಿಕ್ಕೊಳ್ಳುತ್ತಿರುವ ಗೋಪೂಜಾ ಕಾರ್ಯಕ್ರಮದ ಪ್ರಾರಂಭದ ಹಂತದಲ್ಲಿ ಸಕ್ರಿಯರಾಗಿದ್ದ ಅಶೋಕ್ ಪೂಜಾರಿ ಕರ್ನೂರು ಹಾಗೂ ಪ್ರವೀಣ್ ಪೆರ್ಲಂಪಾಡಿ ಇವರುಗಳನ್ನು ದಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳು ಶಾಲು, ಸ್ಮರಣಿಕೆ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.


ಭಜನಾ ಕಾರ್ಯಕ್ರಮ
ದುರ್ಗಾವಾಹಿನಿ ಭಜನಾ ತಂಡ ಮಾಣಿಯಡ್ಕ, ಶ್ರೀ ಪಂಚಲಿಂಗೇಶ್ವರ ಭಜನ ತಂಡ ಅಮ್ಮಿನಡ್ಕ, ಓಂ ಶ್ರೀ ಭಜನಾ ತಂಡ ಸಸ್ಪೆಟ್ಟಿ, ಗೆಳೆಯರ ಬಳಗ ಭಜನಾ ತಂಡ ಕಾವು ಇವರುಗಳಿಂದ ಭಜನಾ ಕಾರ್ಯಕ್ರಮ ಹಾಗೂ ಗೋಪೂಜೆ ಯ ಸಂದರ್ಭದಲ್ಲಿ ಮಣಿಯಾಡ್ಕ ದುರ್ಗಾವಾಹಿನಿ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಿತು, ಭಜನಾ ತಂಡವನ್ನು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ತುಳು ಹಾಸ್ಯಮಯ ಕುಸಲ್ಡೊಂತೆ ಅಸಲ್ ಹಾಸ್ಯ ಕಾರ್ಯಕ್ರಮ
ಕಾರ್ಯಕ್ರಮ ಬಳಿಕ ರಾತ್ರಿ ಗಂಟೆ 8.30 ರಿಂದ ವಿಶ್ವ ಹಿಂದೂ ಪರಿಷತ್ ಕಾವು ಘಟಕದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಕಾವು ಇವರ ಪ್ರಾಯೋಜಕತ್ವದಲ್ಲಿ ಟೀಮ್ ಮಂಜುಶ್ರೀ ತಂಡದಿಂದ ಕುಸಲ್ಡೊಂತೆ ಅಸಲ್ ಹಾಸ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here