ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಈಡನ್ ಗ್ಲಾಂಝಾ 24″ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲೆಯ ಝೀಕ್ಯೂ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ರಂಝೀ ಮುಹಮ್ಮದ್ ಅತಿಥಿಗಳನ್ನು ಸ್ವಾಗತಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ಅವರ ಬದುಕಿನಲ್ಲಿ ಯಾವ ರೀತಿಯ ಬದಲಾವಣೆ ಕಾಣಲು ಸಾಧ್ಯ ಎಂಬುವುದರ ಬಗ್ಗೆ ವಿವರಿಸಿದರು.
ಸವಣೂರು ಜುಮಾ ಮಸೀದಿಯ ಧರ್ಮಗುರು ಅಶ್ರಫ್ ಬಾಖವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೈತಡ್ಕ ಜುಮಾ ಮಸೀದಿಯ ಧರ್ಮ ಗುರು ಸಫ್ವಾನ್ ಜೌಹರಿ ಮೀಲಾದಿನ ಸಂದೇಶ ನೀಡಿದರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ವಿದ್ಯೆಯ ಮಹತ್ವದ ಬಗ್ಗೆ ವಿವರಿಸಿದರು.
ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸಂಸ್ಥೆಯ ಬೆಳವಣಿಗೆ, ಅಭಿವೃದ್ದಿ ಕಾರ್ಯಗಳ ಕುರಿತು ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಸಾಹಿತಿ, ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿಯವರು ಕಲೆ, ಸಾಹಿತ್ಯದ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ವಿವರಿಸಿದರು. ಬಳಿಕ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಲೋಗೋ ಅನಾವರಣ:
ಮಕ್ಕಳ ತಾರ್ಕಿಕ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ ಹೆಚ್ಚಿಸಲು ಶಾಲೆಯು ‘ಲೋಜಿ ಕಿಡ್ಸ್’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಲೋಗೋವನ್ನು ಸಂಸ್ಥೆಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಅನಾವರಣಗೊಳಿಸಿದರು.
ಅದೇ ರೀತಿ ಮಕ್ಕಳ ಮಾತನಾಡುವ ಕೌಶಲ್ಯ, ಆತ್ಮವಿಶ್ವಾಸ ಹೆಚ್ಚಿಸಲು ಶಾಲೆಯು ಈಡನ್ ರೇಡಿಯೋ 24.5 ಎಂಬ ರೇಡಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಲೋಗೋವನ್ನು ನಾರಾಯಣ ರೈ ಕುಕ್ಕುವಳ್ಳಿ ಅನಾವರಣಗೊಳಿಸಿದರು. ಅದೇ ರೀತಿ ಶಾಲೆಯಲ್ಲಿ ಮಕ್ಕಳಿಗೆ ಸಿವಿಲ್ ಸರ್ವಿಸ್ ಪರೀಕ್ಷೆಯ ಅರಿವು ಮತ್ತು ಪೂರ್ವ ಸಿದ್ಧತೆಗಾಗಿ ಜೆನಿಯೋಡೆಲ್ಮಾಸ್ ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಜೆನಿಯೋಡೆಲ್ಮಾಸ್ ಆಫ್ ದಿ ಇಯರ್ ಆಗಿ ಹೊರಹೊಮ್ಮಿದ ಮುಹಮ್ಮದ್ ಸುಹಾನ್‌ರನ್ನು ಶಾಲೆಯ ಸ್ಪರ್ಧಾತ್ಮಕ ಪರೀಕ್ಷೆಯ ಕೋಆರ್ಡಿನೇಟರ್ ಆದ ಇಮ್ತಿಯಾಝ್ ಸಿ ಎಂ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್ ಮಂಗಳೂರು, ಆಡಳಿತ ಸಮಿತಿಯ ಸದಸ್ಯರಾದ ಪುತ್ತು ಬಾವ ಹಾಜಿ ಸವಣೂರು, ಖಾದರ್ ಹಾಜಿ ಸವಣೂರು ಮತ್ತು ಅಬ್ಬಾಸ್ ಬಾವ ಹಾಜಿ, ಹಮೀದ್ ಹಾಜಿ ಬೈತಡ್ಕ, ಇಸ್ಮಾಯಿಲ್ ಹಾಜಿ ಬೈತಡ್ಕ, ಮುಸ್ತಫಾ ಸಅದಿ, ನಿಸಾರ್ ದರ್ಬೆ, ಮುಹಮ್ಮದ್ ಹಾಜಿ ನಡುಪ್ಪದವು, ಅಶ್ರಫ್ ಕೇಕುಡೆ, ರಝಾಕ್ ಸವಣೂರು, ರಫೀಕ್ ಸವಣೂರು, ಬಶೀರ್ ಇಂದ್ರಾಜೆ, ಮುಹಮ್ಮದ್ ಹಾಜಿ, ನಝೀರ್ ದೇವಸ್ಯ ಶುಭ ಹಾರೈಸಿದರು.
ನಂತರ ಶಾಲಾ ಝಹರತುಲ್ ಕುರಾನ್, ಕಿಂಡರ್ ಗಾರ್ಡನ್, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ವರ್ಣ ರಂಜಿತ ಬಹು ಭಾಷಾ ಹಾಡು, ಭಾಷಣ, ದಫ್, ಬುರ್ದಾ, ಖವ್ವಾಲಿ, ಕಥಾ ಪ್ರಸಂಗದ ಮೂಲಕ ನೆರೆದ ಪ್ರೇಕ್ಷಕರ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಭೋಧಕ ಮತ್ತು ಬೋಧಕೇತರ ವರ್ಗದವರಿಗೆ ಸಂಸ್ಥೆಯ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅರೆಬಿಕ್ ವಿಭಾಗದ ಶಿಕ್ಷಕ ಹುಸೈನ್ ಸಖಾಫಿ ಹಾಗೂ ಅಕಾಡೆಮಿಕ್ ಕೋಆರ್ಡಿನೇಟರ್ ಅರ್ಪಿತ ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
ಸಂಸ್ಥೆಯ ಶಿಕ್ಷಕಿಯರಾದ ಸನನ್, ಕುಮಾರಿ ಶ್ರುತಿ ಮತ್ತು ಫಾತಿಮತ್ ಆಫ್ರೀನ ಕಾರ್ಯಕ್ರಮ ನಿರೂಪಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ವಂದಿಸಿದರು.