ಪುತ್ತೂರು: ಆನೆಗುಂಡಿಯಲ್ಲಿ ಕಾಡಾನೆಗಳು ಕಂಡುಬಂದಿದ್ದು, ಕೃಷಿ ಬೆಳೆ ಹಾನಿ ಮಾಡಿ ಕೃಷಿಕರ ನಿದ್ದೆಗೆಡಿಸಿದೆ. ಕಾಡಾನೆಗಳು ನ. 12ರಂದು ಬೆಳಿಗ್ಗೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ರಸ್ತೆ ಬದಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿಸಿದ್ದು, ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ಕಂಡುಬಂದಿದೆ.
ಎರಡು ಆನೆಗಳು ಕೆಲವು ತಿಂಗಳ ಹಿಂದೆ ಅಮ್ಚಿನಡ್ಕ ಮುಖಾರಿಮೂಲೆಯ ಅಬ್ದುಲ್ ರಝಾಕ್ ,ಶರತ್ ಕುಮಾರ್ ರೈ, ಪೆರ್ನಾಜೆ ಕಮ್ಮಿತಡ್ಕ ಬಾಬು ನಾಯ್ಕ, ನ್ಯೂಜಿಬೈಲ್ ಜಯಪ್ರಕಾಶ್ ರೈ ರವರ ತೋಟಕ್ಕೆ ನುಗ್ಗಿ ಹಾನಿಮಾಡಿರುತ್ತದೆ.
ಪ್ರಸ್ತುತ ಈ ಆನೆಗಳು ದೇಲಂಪಾಡಿ ಕಾಡಿನಲ್ಲಿ ಬೀಡು ಬಿಟ್ಟಿದೆ ಎಂದು ಪ್ರತ್ಯಕ್ಷದರ್ಷಿಗಳು ತಿಳಿಸಿದ್ದಾರೆ. ಇದರಿಂದ ಅಲ್ಲಿಯ ಗ್ರಾಮಸ್ಥರು ಭಯಭೀತರಾಗಿದ್ದು, ಆಸುಪಾಸಿನ ಗ್ರಾಮಸ್ಥರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆ ಅವರ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.