ಪುತ್ತೂರು: ಕೋರ್ಟ್ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿರುವ ವಿಜಿತ್ ಜ್ಯುವೆಲ್ಲರ್ಸ್ ಮಳಿಗೆಯ ಮಾಲಕ, ಲಲಿತಾ ಅಚ್ಯುತ ಆಚಾರ್ಯರವರ ಪುತ್ರ ವಿಜಿತ್ ಕುಮಾರ್ ರವರ ವಿವಾಹವು ಕೊಕ್ಕಡ ಅರಸಿನಮಕ್ಕಿ ಪ್ರೇಮಾ ನಾರಾಯಣ ಆಚಾರ್ಯರವರ ಪುತ್ರಿ ಅಶ್ವಿತಾರವರೊಂದಿಗೆ ನ. 10 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಸತೀಶ್ ರೈ ಮಿಶನ್ ಮೂಲೆ, ಪುತ್ತಿಲ ಪರಿವಾರ ಟ್ರಸ್ಟ್ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಬಲರಾಮ ಆಚಾರ್ಯ, ಮುಳಿಯ ಜ್ಯುವೆಲ್ಸ್ ನ ಕೇಶವಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ, ಸುಳ್ಯ ಮುಳಿಯ ಜ್ಯುವೆಲ್ಲರ್ಸ್ ನ ಗೋವಿಂದ ಭಟ್, ಶಿವರಾಮ ಭಟ್, ಕಿಲ್ಲೆ ಮೈದಾನದ ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ, ಕುಕ್ಕಾಡಿ ತಂತ್ರಿವರ್ಯರಾದ ಪ್ರೀತಂ ಪುತ್ತೂರಾಯ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಆದರ್ಶ ಆಸ್ಪತ್ರೆಯ ಡಾ.ಪ್ರಸಾದ್ ಭಂಡಾರಿ, ಸತೀಶ್ ನಾಯ್ಕ್ ಪರ್ಲಡ್ಕ, ನಗರಸಭೆ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ವೇದನಾಥ ಸುವರ್ಣ ಪುರುಷರಕಟ್ಟೆ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪುಡಾ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ರೋಟರಿ ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು.