ಪುತ್ತೂರು:: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಧ್ವಜಸ್ಥಂಭ ನಿರ್ಮಾಣಗೊಂಡು ಹಾಗೂ ಬ್ರಹ್ಮರಥೋತ್ಸವ ಸಮರ್ಪಣೆಗೊಂಡು ಬ್ರಹ್ಮಕಲಶ ನಡೆದ ಬಳಿಕ ಇದೀಗ ಪ್ರಥಮ ಭಾರಿಗೆ ನ.15ರಂದು ವಿಜ್ರಂಭಣೆಯಿಂದ ಲಕ್ಷದೀಪೋತ್ಸವ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 8:00ಕ್ಕೆ ಲಕ್ಷದೀಪೋತ್ಸವದ ಅಂಗವಾಗಿ ಜನಾರ್ದನನ ನಡೆಯಲ್ಲಿ ಭಕ್ತಾದಿಗಳಿಂದ ಫಲಾನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ಬಳಿಕ ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ಜನಾರ್ದನ ದೇವರಿಗೆ ನವಕ ಕಲಶಾಭಿಷೇಕ, ಜನಾರ್ದನ ದೇವರ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 7ಕ್ಕೆ ಮಹಾಗಣಪತಿ ದೇವರಿಗೆ ರಂಗಪೂಜೆ, ಬಳಿಕ ದೀಪೋತ್ಸವಕ್ಕೆ ಚಾಲನೆ, ಬಳಿಕ ಶ್ರೀ ಜನಾರ್ದನ ದೇವರಿಗೆ 48 ಅಗೆಲುಗಳ ಮಹಾರಂಗಪೂಜೆ ನಡೆಯಲಿದೆ. ಬಳಿಕ ಶ್ರೀ ಜನಾರ್ದನ ದೇವರ ವೈಭವದ ಬಲಿ ಉತ್ಸವಗಳು ಪ್ರಾರಂಭಗೊಳ್ಳಲಿದೆ. ರಂಗಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.