ಪುತ್ತೂರು: ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳ 5 ವಿಜ್ಞಾನ ಪ್ರಾಜೆಕ್ಟ್ ಗಳು ಇನ್ಸೆಫ್ ರೀಜನಲ್ ಫೇರ್ ನಡೆಸುವ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಗೆ ಆಯ್ಕೆಯಾಗಿದೆ. ಡಿ.5ರಂದು ಮೂಡಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಏಳನೇ ತರಗತಿಯ ಆದಿತ್ಯ ಕೆ, ಹೃತ್ವಿಕಾ ಆರ್ ನಾೖಕ್, ಎಂಟನೇ ತರಗತಿಯ ತುಷಾರ್ ಆನಂದ್ ಆರ್ ರಾವ್, ಒಂಭತ್ತನೇ ತರಗತಿಯ ಮಿಥುನ್ ಪಿ ಪಿ, ಮತ್ತು ಅದ್ವಿಜ್ ಸಜೇಶ್, ಭಾಗವಹಿಸಲಿದ್ದಾರೆ. ಒಟ್ಟು 5 ವಿಜ್ಞಾನ ಪ್ರಾಜೆಕ್ಟ್ಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇವರಿಗೆ ಸಹ ಶಿಕ್ಷಕರಾದ ಶ್ಯಾಮಲಾ ಬಂಗೇರ, ನಿವೇದಿತ ಮಾರ್ಗದರ್ಶನ ಮಾಡಿದ್ದಾರೆ.