ನ್ಯೂ ಜೆನ್ ಡಿಝೈರ್ ಭಾರತ್‌ನಿಂದ ಬಿಡುಗಡೆ

0

ಪುತ್ತೂರು: ಕಾರುಗಳ ಉತ್ಪಾದನೆ ಹಾಗೂ ಮಾರಾಟ ಸೇವೆಯಲ್ಲೂ ಅದ್ವಿತೀಯ ಸ್ಥಾನ ಪಡೆದುಕೊಂಡಿರುವ ಮಾರುತಿ ಸುಝುಕಿ ಅರೆನಾ ನಾಲ್ಕನೇ ತಲೆಮಾರಿನ ,ಎಲ್ಲರನ್ನೂ ಬೆರಗುಗೊಳಿಸಬಲ್ಲ ನಿರೀಕ್ಷೆಯ ನ್ಯೂ ಡಿಝೈರ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು , ಹೆಸರಾಂತ ಡೀಲರ್ ಭಾರತ್ ಅಟೋಕಾರ್ಸ್ ಇದರ ಪುತ್ತೂರು ಶಾಖೆಯಲ್ಲಿ ನ.13ರಂದು ವಿನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮ ನೆರವೇರಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ, ದಾನಿಯೂ ಆಗಿರುವ ಸುಬ್ರಹ್ಮಣ್ಯ ನಿವಾಸಿ ಡಾ| ರವಿ ಕಕ್ಕೆಪದವು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ , ವಿನೂತನ ಕಾರನ್ನು ಅನಾವರಣಗೊಳಿಸಿ ಮಾತನಾಡಿ , ರೈತ ವರ್ಗವು ಅತೀ ಹೆಚ್ಚಾಗಿ ಪ್ರೀತಿಸುವ ವಾಹನವೆಂದರೆ ಅದು ಮಾರುತಿ. ಕಾರಣ ಕೃಷಿ ಉತ್ಪನ್ನಗಳ ಸಾಗಾಟ , ಕೊಂಡುಕೊಳ್ಳಲು ಹಾಗೂ ನಿರ್ವಹಣೆ ದೃಷ್ಟಿಯಿಂದಲೂ ತುಂಬಾ ಲಾಭದಾಯಕವಾಗಿದೆ. ನಾನೂ ಕೂಡ ಮಾರುತಿಯ ಅಭಿಮಾನಿ ಮತ್ತು ಗ್ರಾಹಕ ಎಂದರಲ್ಲದೆ ಭಾರತ್ ವತಿಯಿಂದ ಗ್ರಾಹಕರಿಗೆ ದೊರಕುವ ಸೇವೆ , ಮಾಹಿತಿ ಇವೆಲ್ಲವೂ ಇನ್ನೂ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿಯೆಂದು ಹೇಳಿ ಶುಭಹಾರೈಸಿದರು. ಈ ವೇಳೆ ಶಾಖಾ ವ್ಯವಸ್ಥಾಪಕ ಪ್ರದೀಪ್ ಶೆಟ್ಟಿ , ವರ್ಕ್ ಶಾಪ್ ಮ್ಯಾನೇಜರ್ ಆನಂದ್ ಮೂಲ್ಯ , ಕರ್ಣಾಟಕ ಬ್ಯಾಂಕ್ ಪುತ್ತೂರು ಶಾಖೆಯ ವ್ಯವಸ್ಥಾಪಕ ಶ್ರೀಶ ಕೆ ಮತ್ತು ಚೀಫ್ ಮ್ಯಾನೇಜರ್ ಶ್ರೀ ಹರಿ , ಶ್ಯಾಮ್ ಪ್ರಸಾದ್ ಸಹಿತ ಹಲವು ಅತಿಥಿಗಳು ಹಾಜರಿದ್ದರು. ಪೃಥ್ವಿ ಪ್ರಾರ್ಥಿಸಿದರು. ವಿನೂತನ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಆಸಿಫ್ ಮಾಹಿತಿ ನೀಡಿದರು.‌ ವಿನಿತ್ ನಿರೂಪಿಸಿದರು. ಈ ವೇಳೆ ಸಂಸ್ಥೆಯ ಗ್ರಾಹಕರು ಹಾಗೂ ಭಾರತ್ ಅಟೋಕಾರ್ಸ್ ಸಮೂಹ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಇದ್ದರು.
ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರ: ಅತ್ಯಾಕರ್ಷಕ ರಚನೆ ಹೊಂದಿರುವ ಡೆಝ್ಲಿಂಗ್ ನ್ಯೂ ಡಿಝೈರ್ ನಾಲ್ಕನೇ ತಲೆಮಾರಿನ ಕಾರಿನ ಮೊದಲ ಗ್ರಾಹಕರಾದ ಡಾ | ರವಿ ಕಕ್ಕೆಪದವು ಮತ್ತು ರಶ್ಮಿ ಸುಬ್ರಹ್ಮಣ್ಯ ಇವರಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸಿ , ಅಭಿನಂದಿಸಲಾಯಿತು.


ಡಿಝೈರ್ ವಿಶೇಷತೆ

ಝೆಡ್ ಸೀರೀಸ್ ಎಂಜಿನ್ ಹೊಂದಿರುವ ಕಾರು ಪೆಟ್ರೋಲ್ ಹಾಗೂ ಸಿ.ಎನ್.ಜಿ ರೂಪದಲ್ಲಿ ಲಭ್ಯವಿದ್ದು ಪೆಟ್ರೋಲ್ ನಲ್ಲಿ 25.71 ಮೈಲೇಜ್ ಹಾಗೂ ಸಿ.ಎನ್.ಜಿ ಯಲ್ಲಿ 33.73 ಮೈಲೇಜ್ ನೀಡಬಲ್ಲದು. ರೇರ್ ಎ.ಸಿ ವೆಂಟ್, 6 ಏರ್ ಬ್ಯಾಗ್, ಅಟೊ ಗೇರ್ ಶಿಫ್, ವಯರ್ ಲೆಸ್ ಚಾರ್ಜರ್, 360 ಡಿಗ್ರಿ ಹೆಚ್ಡಿ ಕ್ಯಾಮರಾ, ಎಲ್‌ಇಡಿ ಕ್ರಿಸ್ಟಲ್ ವಿಷನ್ ಹೆಡ್ಲ್ಯಾಂಪ್, ಫಸ್ಟ್ ಇಲೆಕ್ಟ್ರಿಕ್ ಸನ್ ರೂಫ್ ಹಾಗೂ ತ್ರಿಡಿ ಟ್ರಿನಿಟಿ ರೇರ್ ಲ್ಯಾಂಪ್ ಸಿಗ್ನೇಚರ್ ಸಹಿತ ಹಲವಾರು ವಿಶೇಷತೆಯನ್ನು ಒಳಗೊಂಡಿದ್ದು ಆರಂಭಿಕ ಬೆಲೆಯು 6.79 (ಎಕ್ಸ್ ಶೋ ರೂಂ) ಪ್ರಾರಂಭಗೊAಡು, 10.14 ಲಕ್ಷಕ್ಕೆ ಟಾಪ್ ಎಂಡ್ ಲಭ್ಯ. ಮಾಹಿತಿಗೆ 9483501730 ಅಥವಾ 9538997230 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here