2 ವರ್ಷದಲ್ಲಿ ಇನ್ನೂ 10 ಶಾಖೆ ಉದ್ಘಾಟನೆಯಾಗಲಿ – ಕಿಶೋರ್ ಕುಮಾರ್ ಪುತ್ತೂರು
ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರು ಸ್ಥಾಪಿಸಿದ ಶತಮಾನವನ್ನು ಪೂರೈಸಿರುವ ಪುತ್ತೂರಿನ ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ನೂತನ ವಿಟ್ಲ ಶಾಖೆಯು ವಿಟ್ಲ ಎಂಪೈರ್ ಮಾಲ್‌ನಲ್ಲಿ ನ.14ರಂದು ಉದ್ಘಾಟನೆಗೊಂಡಿತು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು
ಭದ್ರತಾ ಕೋಶವನ್ನು ಅವರು ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರು ಗಣಕ ಯಂತ್ರ ಉದ್ಘಾಟಿಸಿದರು. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಪ್ರಥಮ ಠೇವಣಿ ಪತ್ರ ಹಸ್ತಾಂತರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಮಾತನಾಡಿ ನೂರಾರು ಮನೆಗಳಿಗೆ ದಾರಿ ದೀಪವಾದ ಈ ಬ್ಯಾಂಕ್ ಎಲ್ಲರಿಗೂ ಆಪ್ತವಾಗಿದೆ. ಸಮಾಜಕ್ಕೆ ಉಪಕಾರ ಮಾಡಿದಾಗ ಸಮಾಜ ನಮ್ಮನ್ನು ಮರಿಯುವುದಿಲ್ಲ ಎಂಬುದಕ್ಕೆ ಟೌನ್ ಬ್ಯಾಂಕ್ ಸಾಕ್ಷಿಯಾಗಿದೆ. ಮುಂದೆ 2 ವರ್ಷದಲ್ಲಿ ಬ್ಯಾಂಕ್ ಇನ್ನೂ 10 ಶಾಖೆಯನ್ನು ಆರಂಭಿಸಲಿ ಎಂದರು.
ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಚಂದ್ರಶೇಖರ್ ಗೌಡ ಕೆ, ನಾರಾಯಣ ಎ.ವಿ, ವಿನೋದ್ ಕುಮಾರ್ ಜಿ, ಮಲ್ಲೇಶ್ ಕುಮಾರ್, ರಮೇಶ್ ನಾಯ್ಕ ಕೆ, ಹೇಮಾವತಿ, ಗಾಯತ್ರಿ ಪಿ ಉಪಸ್ಥಿತರಿದ್ದರು. ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಬ್ಯಾಂಕ್ ನ ನಿರ್ದೇಶಕರಾದ ಕಿರಣ್ ರೈ ಬಲ್ನಾಡು, ಸದಾಶಿವ ಪೈ, ಜಯಂತಿ ನಾಯಕ್ ಅತಿಥಿಗಳನ್ನು ಗೌರವಿಸಿದರು.
ಅದ್ವಿಕಾ ಪ್ರಾರ್ಥಿಸಿದರು. ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಉಪಾಧ್ಯಕ್ಷ ವಿಶ್ವಾಸ್ ಶೆಣೈ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಶೇಖರ್ ಶೆಟ್ಟಿ ವಂದಿಸಿದರು. ವಿಟ್ಲ ಶಾಖೆಯ ಸಹಾಯಕ ಪ್ರಬಂದಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ನ್ಯಾಯವಾದಿ ಶಿವಪ್ರಸಾದ್, ಕರಾವಳಿ ಅಭಿವೃದ್ಧಿಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.