ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೂಕ್ತೇಸರ ಮನೋಜ್ ರೈ ಪೇರಾಲು ರವರ ಧರ್ಮಪತ್ನಿ ಮುನ್ನಲಾಯಿ ಗುತ್ತು ವಿಜಯಾ ರೈ ಪೇರಾಲು (58) ಅಲ್ಪಕಾಲದ ಅನಾರೋಗ್ಯದಲ್ಲಿ ನ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮೃತರು ಪತಿ ಮನೋಜ್ ರೈ ಪೇರಾಲು, ಪುತ್ರಿ ತನ್ವಿ ರೈ ಹಾಗೂ ಅಪಾರ ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಮನೆಗೆ ಅಪಾರ ಸಂಖ್ಯೆಯಲ್ಲಿ ಗಣ್ಯರು,ವಿವಿಧ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ, ಮುಖ್ಯಸ್ಥರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಅಲ್ಪಕಾಲದ ಅಸೌಖ್ಯದಲ್ಲಿದ್ದ ವಿಜಯಾ ರೈ ಅವರು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ಗಂಡ ಮನೋಜ್ ರೈ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಪುತ್ರಿಯನ್ನು ಅಗಲಿದ್ದಾರೆ.