ಸವಣೂರು: ಮಕ್ಕಳ ದಿನಾಚರಣೆಯ ಪ್ರಯುಕ್ತವಾಗಿ ವಿದ್ಯಾರಶ್ಮಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶುಭ ಹಾರೈಸಿ ಮಾತನಾಡಿದ ಸಂಚಾಲಕರು ಸವಣೂರು ಸೀತಾರಾಮ ರೈ ಅವರು ಚಾಚಾ ನೆಹರೂ ಅವರು ಮಕ್ಕಳ ಬಗ್ಗೆ ಹೊಂದಿದ್ದ ಅಪಾರ ಕಾಳಜಿ ಮತ್ತು ಪ್ರೀತಿಯ ಪ್ರತೀಕವಾಗಿ ಆಚರಿಸುವ ಈ ದಿನ ಮಕ್ಕಳನ್ನು ಸಂತೋಷವಾಗಿಡುವುದೇ ನಮ್ಮ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ವಿವಿಧ ಮನೋವಿಕಸನ ಆಟಗಳಲ್ಲಿ ಮತ್ತು ಹಗ್ಗ ಜಗ್ಗಾಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಆಡಳಿತಾಧಿಕಾರಿ, ನ್ಯಾಯವಾದಿ, ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಅವರು ಉಪಸ್ಥಿತರಿದ್ದರು. ಶಿಕ್ಷಕಿ ನಮಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸೀಮಾ ಎಂ. ಅವರು ಸಂವಿಧಾನದ ಪೀಠಿಕೆ ವಾಚನ ಮಾಡಿ ಶಿಕ್ಷಕಿ ಶೀಲಾವತಿ ಅವರು ಸ್ವಾಗತಿಸಿದರು. ಶಿಕ್ಷಕಿ ಲಿಖಿತಾ ಅವರು ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕಿ ಆಶಾಲತಾ, ಶಿಕ್ಷಕಿ ಸುಶ್ಮಿತಾ ಯು ಮತ್ತು ಉಪನ್ಯಾಸಕಿ ಉಮಾ ಎಂ. ಬಹುಮಾನ ವಿಜೇತರ ಪಟ್ಟಿಗಳನ್ನು ವಾಚಿಸಿದರು. ಶಿಕ್ಷಕಿ ವಿನಯಾ ಕಾರ್ಯಕ್ರಮ ನಿರೂಪಣೆ ಮಾಡಿದರು.