ಪುತ್ತೂರು:ಇಲ್ಲಿನ ಪಿ.ಜಿ.ಯೊಂದರಲ್ಲಿದ್ದ ಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗುಲ್ಬರ್ಗಾ ಮೂಲದ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಪ್ರತಿಷ್ಥಿತ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪಿ.ಜಿ.ಯಿಂದ ಕಾಲೇಜಿಗೆ ಹೋಗುತ್ತಿದ್ದರು.ನ.16ರಿಂದ ಆಕೆ ಪಿ.ಜಿ.ಯಿಂದ ನಾಪತ್ತೆಯಾಗಿದ್ದರು.
ಈ ಕುರಿತು ವಿದ್ಯಾರ್ಥಿನಿಯ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಪ್ರಾಪ್ತೆ ವಿದ್ಯಾರ್ಥಿನಿಯನ್ನು ಗುಲ್ಬರ್ಗಾದ ಕಾರ್ತಿಕ್ ಎಂಬಾತ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ನ.17ರಂದು ಆರೋಪಿ ಕಾರ್ತಿಕ್‌ನನ್ನು ಗುಲ್ಬರ್ಗಾದಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.