ಸಿನರ್ಜಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2024 – ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್‌ಮೆಂಟ್ ಕಾಲೇಜ್ ಅಡ್ಯಾರ್ ಇಲ್ಲಿ ಆಯೋಜಿಸಿದ ಸಿನರ್ಜಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2024 ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ಬಿ ತರಗತಿಯ ಸ್ವಸ್ತಿಕ್ ಪ್ರಭು ಎ(ಪುಣಚ ಭವಾನಿ ಶಂಕರ್ ಮತ್ತು ಕಾಂತಿ ದಂಪತಿಗಳ ಪುತ್ರ), ಧನ್ವಿನ್ ಗೌಡ ಎನ್ (ಬನ್ನೂರಿನ ಯಶವಂತ ಗೌಡ ಎನ್ ಮತ್ತು ಉಮಾವತಿ ಎನ್ ದಂಪತಿಯವರ ಪುತ್ರ), ಗುರುಪ್ರಸಾದ್ (ಎಡನೀರ್ ಸುಬ್ಬ ಮತ್ತು ಪುಷ್ಪಾ ದಂಪತಿಗಳ ಪುತ್ರ), ಶಿವಪ್ರಸಾದ್(ಮುಂಡೂರು ರವಿ ಕುಲಾಲ್ ಮತ್ತು ಪುಷ್ಪಾ ಕೆ ದಂಪತಿಗಳ ಪುತ್ರ) ಇವರ ತಂಡವು ಪೆಟ್ರೋಲ್ ಸುರಕ್ಷತೆ ಮಾದರಿಗೆ ವಲಯ 4ರಲ್ಲಿ ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನ ರೂ.7000 ವನ್ನು ಪಡೆದಿರುತ್ತಾರೆ. ಇವರಿಗೆ ವಿಜ್ಞಾನ ಶಿಕ್ಷಕಿ ಮಾನಸ ವಿ ರವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಮುಖ್ಯೋಪಾಧ್ಯಾಯಿನಿಯಾದ ಜಯಲಕ್ಷ್ಮಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here