





ಅಧ್ಯಕ್ಷರಾಗಿ ಅಶ್ರಫ್ ಫಾಝಿಲ್ ಬಾಖವಿ ಆಯ್ಕೆ
ಪುತ್ತೂರು: ಸಮಸ್ತ ಬಾಖವಿ ಉಲಮಾ ಒಕ್ಕೂಟ ಕರ್ನಾಟಕ ಇದರ ವತಿಯಿಂದ ವೆಲ್ಲೂರು ಬಾಖಿಯಾತು ಸ್ವಾಲಿಹಾತು ಅರೆಬಿಕ್ ಕಾಲೇಜು ಇದರ ಸ್ಥಾಪಕರಾದ ಶಂಸುಲ್ ಉಲಮಾ ಶಾ ಅಬ್ದುಲ್ ವಹ್ಹಾಬ್ ಅಲ್ ಖಾದಿರಿ(ರ) ಇವರ ಅನುಸ್ಮರಣೆ ಹಾಗೂ ಕರ್ನಾಟಕ ರಾಜ್ಯ ಬಾಖವಿ ಸಂಗಮ ಮತ್ತು ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಸವಣೂರು ಚಾಪಲ್ಲ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಮಸ್ತ ಬಾಖವಿ ಉಲಮಾ ಒಕ್ಕೂಟ ಕರ್ನಾಟಕ ಇದರ ಅಧ್ಯಕ್ಷರೂ, ಪಯ್ಯಕ್ಕಿ ಮುದರ್ರಿಸರೂ ಆದ ರಫೀಕ್ ಪಾಝಿಲ್ ಬಾಖವಿ ಮಠ ವಹಿಸಿದ್ದರು. ಅಬ್ದುಲ್ ಅಝೀಝ್ ಬಾಖವಿ ಪುತ್ತೂರು ಕಿರಾಅತ್ ಪಠಿಸಿದರು. ಚಾಪಲ್ಲ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಬಾಖವಿ ಚಿಕ್ಕಮಗಳೂರು ಕಳೆದ ಸಾಲಿನ ಸಭೆಗಳ ಮತ್ತು ಕಾರ್ಯಚಟುವಟಿಕೆಗಳ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಹಮೀದ್ ಬಾಖವಿ ಅನುಸ್ಮರಣಾ ಪ್ರಭಾಷಣ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅನ್ಯಧರ್ಮೀಯ ಸಹೋದರನೊಬ್ಬನು ನೀರಿನಲ್ಲಿ ಮುಳುಗಿ ಪ್ರಾಣಾಪಾಯಲ್ಲಿರುವುದನ್ನು ಮನಗಂಡು ಜೀವರಕ್ಷಿಸಿದ ಹಾರಿಸ್ ಬಾಖವಿ ಎಡಪ್ಪಾಲ ಕೊಡಗು ಇವರನ್ನು ಸನ್ಮಾನಿಸಲಾಯಿತು.





ನಂತರ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ನಿರ್ದೇಶಕರಾಗಿ ರಫೀಕ್ ಫಾಝಿಲ್ ಬಾಖವಿ ಮಠ, ಇಲ್ಯಾಸ್ ಬಾಖವಿ, ಅಧ್ಯಕ್ಷರಾಗಿ ಅಶ್ರಫ್ ಫಾಝಿಲ್ ಬಾಖವಿ ಚಾಪಲ್ಲ ಸವಣೂರು, ಉಪಾಧ್ಯಕ್ಷರಾಗಿ ಹರ್ಷಾದ್ ಬಾಖವಿ ಕೊಡಗು, ಹಸನ್ ಬಾಖವಿ ಓಲೆಮುಂಡೋವು, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಬಾಖವಿ ಎಡಪ್ಪಾಲ ಕೊಡಗು ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಬಾಖವಿ ಪುತ್ತೂರು, ಸ್ವಾದಿಕ್ ಬಾಖವಿ ಬಜೆಗುಂಡಿ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಬಾಖವಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಬಾಖವಿ ಚಿಕ್ಕಮಗಳೂರು ಮಾಧ್ಯಮ ಪ್ರತಿನಿಧಿಗಳಾಗಿ ಸಫ್ವಾನ್ ಬಾಖವಿ ಮಾಪಾಲ್, ಜಾಫರ್ ಬಾಖವಿ ಮರ್ದಾಳ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುನವ್ವರ್ ಬಾಖವಿ ಕರಾಯ, ನೌಶಾದ್ ಬಾಖವಿ ಕೂಡಿಗೆ, ರಫೀಕ್ ಬಾಖವಿ ಮೂಡುಬಿದ್ರೆ, ರಫೀಕ್ ಬಾಖವಿ ಕೊಡಗರಹಳ್ಳಿ, ರಾಝಿ ಬಾಖವಿ ಕುಕ್ಕಾಜೆ, ರಫೀಕ್ ಬಾಖವಿ ಕುಶಾಲನಗರ, ಆರಿಫ್ ಬಾಖವಿ ಕೊಪ್ಪ, ಶಬ್ಬೀರ್ ಬಾಖವಿ, ಖಲಂದರ್ ಶಾಫಿ ಬಾಖವಿ ಕರಾಯ, ರಶೀದ್ ಬಾಖವಿ ಕೊಡಗು, ಆರಿಫ್ ಬಾಖವಿ ನೆಲ್ಯಾಡಿ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಾಪಲ್ಲ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಕನಿಮಜಲು, ಮಾಜಿ ಅಧ್ಯಕ್ಷರಾದ ಉಮರ್ ಹಾಜಿ ಕೆನರಾ, ಜಮಾಅತ್ ಕಾರ್ಯಕಾರಿ ಸಮಿತಿ ಸದಸ್ಯರಾದ ಉಸ್ಮಾನ್ ಆರ್ತಿಕೆರೆ, ಮಾಜಿ ಉಪಾಧ್ಯಕ್ಷರಾದ ಬಿ.ಎಂ. ಆಮು ಹಾಜಿ ಸೇರಿದಂತೆ ಮಕಾಶಿಫುಲ್ ಖುಲೂಬ್ ದರ್ಸ್ ಚಾಪಲ್ಲ ಇದರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಬ್ದುಲ್ ಸಮದ್ ಬಾಖವಿ ಸ್ವಾಗತಿಸಿದರು. ಅಶ್ರಫ್ ಬಾಖವಿ ವಂದಿಸಿದರು.









