ಅಲ್ಪಾವಧಿ ಸಾಲ ವಸೂಲಾತಿಗೆ ದಾವೆ, ಅಮಲ್ದಾರಿ ನೊಟೀಸ್- ಆದರೆ ಕ್ರಮ ಕೈಗೊಳ್ಳಬಾರದೆಂಬ ಇಲಾಖಾ ನಡೆ ಹಾಸ್ಯಾಸ್ಪದ-ಎಸ್ ಡಿ ಪಿ ಐ

0

ಪುತ್ತೂರು: ಸಹಕಾರ ಸಂಘಗಳ ಸಭೆಯಲ್ಲಿ ಅಲ್ಪಾವಧಿ ಸಾಲವನ್ನು ಮರು ಪಾವತಿ ಮಾಡಲು ಕ್ರಮಕೈಗೊಳ್ಳಬೇಕೆಂದು ನಿರ್ಣಯಿಸಿದಂತೆ ಮರು ವಸೂಲಾತಿಗೆ ದಾವೆ ಹೂಡಬೇಕು ಮತ್ತು ಅಮಲ್ದಾರಿ ನೊಟೀಸ್ ಮಾಡಿರುವುದು ರೈತರನ್ನು ದಿಗ್ಭ್ರಮೆಗೊಳಿಸಿದೆ. ಇಲಾಖಾ ನಡೆ ಹಾಸ್ಯಸ್ಪದ ಎಂದು ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟೀಸ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ರೈತರಿಗೆ ಇದು ದೊಡ್ಡ ಹೊರೆಯಾಗಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಿದ್ದೇವೆ. ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿ ರೈತರ ಹಿತಾಶಕ್ತಿ ಕಾಪಾಡುವಂತೆ ಮಾದ್ಯಮದ ಮೂಲಕ ವಿನಂತಿಸುತ್ತೇವೆ ಎಂದ ಅವರು, ಬೆಳೆ ಸಾಲದ ಬಡ್ಡಿ ಅಥವಾ ಮೊತ್ತವನ್ನು ಮರುಪಾವತಿಸಲು ಒಂದು ದಿನ ವಿಳಂಬವಾದರೂ ಶೇ.13ರಷ್ಟು ಬಡ್ಡಿ ಬೀಳುತ್ತದೆ. ಈ ವಿಚಾರವನ್ನು ಅಧಿಕಾರಿಗಳು ತಿಳಿದಿದ್ದರೂ ಸರಕಾರದ ಗಮನಕ್ಕೆ ತಾರದೇ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ 741 ಮಂದಿ ರೈತರು ಅವಕಾಶ ವಂಚಿತರಾಗಿದ್ದಾರೆ. ಸದರಿ ರೈತರು ಬೇರೆ ಯಾವುದೇ ಸಾಲ ಮಾಡಲು ಆಗದೇ ಬಡ್ಡಿಯನ್ನು ಕಟ್ಟಲಾಗದೇ ಆತ್ಮಹತ್ಯೆಗೂ ಶರಣಾಗಿರುವ ನಿದರ್ಶನಗಳಿವೆ. ಆದ್ದರಿಂದ ಸಂಕಷ್ಟದಲ್ಲಿರುವ 741 ಮಂದಿ ರೈತರ ಸುಮಾರು ರೂ.14 ಕೋಟಿಯಷ್ಟು ಬಡ್ಡಿ ಮತ್ತು ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸರಕಾರದ ಗಮನ ಸೆಳೆದು ಬೆಳಗಾವಿಯ ಅಧಿವೇಶನದಲ್ಲಿ ರೈತರ ಧ್ವನಿಯಾಗಬೇಕೆಂದು ಶಾಸರಕಲ್ಲಿ ವಿನಂತಿಸಲಾಗುವುದು ಎಂದವರು ಹೇಳಿದರು.

ವಕ್ಫ್ ಜಾಗಕ್ಕೆ ಸಂಬಂಧಿಸಿ ಯಾವುದೇ ರೈತರಿಗೆ ಅನ್ಯಾಯ ಆಗಬಾರದು ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಎ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಇಬ್ರಾಹಿಂ ಸಾಗರ್, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ಉಸ್ಮಾನ್ ಎ.ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here