ನೆಲ್ಯಾಡಿ: ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಸ್ತು ಪ್ರದರ್ಶನ

0

ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸೃಜನಶೀಲತೆ, ಜೀವನ ಕೌಶಲ್ಯ ಹಾಗೂ ಸಾಂಸ್ಕೃತಿಕ ಪ್ರಜ್ಞೆಗೆ ಸಾಕ್ಷಿಯಾಗಿ ಸತತ 4ನೇ ವರ್ಷದ ವಿಜ್ಞಾನ ವಸ್ತು ಪ್ರದರ್ಶನ(ಟೆಕ್ರಾಫ್ಟ್), ವ್ಯಾಪಾರ ಮೇಳ(ರೆಕ್ಸ್ಪೋ) ಹಾಗೂ ಪ್ರಾಚ್ಯವಸ್ತು ಪ್ರದರ್ಶನ(ಆರ್ಕಿಯೋ ಫ್ಯಾಕ್ಟ್ಸ್) ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಪೂರ್ವವಿದ್ಯಾರ್ಥಿ, ಪ್ರಗತಿಪರ ಕೃಷಿಕ ಹಾಗೂ ಕ್ಷಿತಿ ಎಂಟರ್ ಪ್ರೈಸಸ್ ಮಾಲಕ ಸಮಂತ್ ಕುಮಾರ್ ಬಸ್ತಿ ಅವರು ಪ್ರಾಚ್ಯ ವಸ್ತು ಪ್ರದರ್ಶನವನ್ನು, ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್ ಅವರು ಕಲಾ-ಪ್ರಾಚ್ಯ ವಸ್ತು ಪ್ರದರ್ಶನವನ್ನು ಹಾಗೂ ನೆಲ್ಯಾಡಿಯ ಐಐಸಿಟಿ ಮಾಲಕ, ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿಯೂ ಆದ ಪ್ರಶಾಂತ್ ಸಿ.ಎಚ್.ಅವರು ವ್ಯಾಪಾರ ಮೇಳವನ್ನು ಉದ್ಘಾಟಿಸಿದರು. ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಆಯೋಜಿಸಿದ್ದ ಇಲೆಕ್ಟ್ರಾನಿಕ್ಸ್ ಟೆಲಿಕಮ್ಯುನಿಕೇಶನ್ ವಿಭಾಗದ ವಸ್ತು ಪ್ರದರ್ಶನವನ್ನು ಸಂಸ್ಥೆಯ ಸಂಚಾಲಕ ರೆ.ಫಾ. ನೋಮಿಸ್ ಕುರಿಯಾಕೋಸ್ ಅವರು
ಉದ್ಘಾಟಿಸಿದರು.


ಮೇಳದಲ್ಲಿ ಸುಮಾರು 104 ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು. ಭಾರತದ ಗ್ರಾಮೀಣ ಬದುಕಿನ ಸೂಚಕವಾದ ಪ್ರಾಚ್ಯ ಹಾಗೂ ಕೃಷಿ ಸಲಕರಣೆಗಳ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು. ಸಂಸ್ಥೆಯ ವಿಜ್ಞಾನ, ಇತಿಹಾಸ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕರು, ಶಿಕ್ಷಕರು ಹಾಗೂ ಪಾಲಕರ ಸಹಕಾರದೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನೂರಾರು ಪಾಲಕರು ಹಾಗೂ ನೆರೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಕಾಲೇಜಿನ ಪ್ರಿನ್ಸಿಪಾಲ್ ಎಂ.ಕೆ. ಏಲಿಯಾಸ್, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ಹರಿಪ್ರಸಾದ್ ಕೆ, ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ. ಕೆ, ಮಧು ಎ.ಜೆ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಶಿಕ್ಷಕ ತೋಮಸ್ ಎಂ.ಐ ಸ್ವಾಗತಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here