ಪುತ್ತೂರು: ಕಡಬ, ಕುದ್ಮಾರು, ಕೂರದಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಪವರ್ ಪ್ಲಸ್ ಎಲೆಕ್ಟ್ರಿಕಲ್ಸ್ ಹಾಗೂ ಝೆನ್ ಮಾರ್ಕ್ ಕಮ್ಯುನಿಕೇಶನ್ ಇದರ ನೂತನ ಬ್ರಾಂಚ್ ನಿಂತಿಕಲ್ಲು ವರ್ಣಿ ಕಾಂಪ್ಲೆಕ್ಸ್‌ನಲ್ಲಿ ನ.25ರಂದು ಶುಭಾರಂಭಗೊಂಡಿತು.
ಸಯ್ಯದ್ ಅಬ್ದುರ್ರಹ್ಮಾನ್ ಮಸ್‌ಹೂದ್ ತಂಙಳ್ ಕೂರತ್ ದುವಾ ಮಾಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್ ಶುಭ ಹಾರೈಸಿದರು. ಅತಿಥಿಗಳಾದ ರಾಮಚಂದ್ರ ಸೊರಕೆ, ಮಾಧವ ಗೌಡ ಕಾಮಧೇನು, ಸಯ್ಯದ್ ಮೀರಾ ಸಾಹೇಬ್ ಕಡಬ, ವರ್ಣಿ ಕಟ್ಟಡದ ಮಾಲಕ ಸೇಸಪ್ಪ ಗೌಡ, ಪುತ್ತೂರು ಡಿ.ಎಂ.ಎಲ್ ಎಲೆಕ್ಟ್ರಿಕಲ್ಸ್‌ನ ಲತೀಫ್, ಸಿದ್ದೀಕ್ ಸುಲ್ತಾನ್, ಮಹಮ್ಮದ್ ಆಲಿ ನೇರೋಳ್ತಡ್ಕ, ಅಬ್ದುಲ್ ರಹಿಮಾನ್ ಇರ್ದೆ, ಮಸೂದ್ ಸಖಾಫಿ ನೇರೋಳ್ತಡ್ಕ, ರಝಾಕ್ ಸಖಾಫಿ ನೇರೋಳ್ತಡ್ಕ, ಬಾಳಿಲ ಗ್ರಾ.ಪಂ ಅಧ್ಯಕ್ಷ ಝಮೀರ್, ಲೋಕಯ್ಯ ಪರವ, ಪುತ್ತೂರು ಎಸ್.ಕೆ ಎಲೆಕ್ಟ್ರಿಕಲ್ಸ್‌ನ ಸಚಿತ್ ಕುಮಾರ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶ್ವಾಸಾರ್ಹ ಸಂಸ್ಥೆ:
ಕಳೆದ ಐದು ವರ್ಷಗಳಿಂದ ಕೂರ ಕುದ್ಮಾರಿನಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಪವರ್ ಪ್ಲಸ್ ಸಂಸ್ಥೆಯು ಗ್ರಾಹಕರಿಗೆ ಎಲ್ಲಾ ತರದ ವಿದ್ಯುತ್ ಸಂಪರ್ಕ, ಟಿ.ಸಿ, ಕಂಬದ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡುವ ಮೂಲಕ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ನಿಂತಿಕಲ್ಲು ಭಾಗದಲ್ಲೂ ಸೇವೆ ನೀಡುವ ಉದ್ದೇಶಕ್ಕೆ ನಮ್ಮ ಸಂಸ್ಥೆಯ ನೂತನ ಶಾಖೆಯನ್ನು ನಿಂತಿಕಲ್ಲಿನಲ್ಲಿ ಆರಂಭಿಸಿದ್ದೇವೆ. ಸಂಸ್ಥೆಯಲ್ಲಿ ಎಲ್ಲಾ ತರಹದ ವಿದ್ಯುತ್ ಸಾಮಾಗ್ರಿಗಳು, ಪ್ಲಂಬಿಂಗ್ ಸಾಮಾಗ್ರಿಗಳು, ಮನೆಯ ವಯರಿಂಗ್ ಹಾಗೂ ಎಲ್ಲಾ ವಿಧದ ಪೇಪರ್ ವರ್ಕ್‌ಗಳನ್ನು ಕೈಗೆಟುಕುವ ದರದಲ್ಲಿ ಮಾಡಿಕೊಡಲಾಗುವುದು. ಅಲ್ಲದೇ ಟೂರ‍್ಸ್ ಟ್ರಾವೆಲ್ಸ್ ಹಾಗೂ ಇನ್ನಿತರ ಆನ್‌ಲೈನ್ ಸಂಬಂಧಿತ ಸೇವೆಗಳಿಗಾಗಿ ಝೆನ್ ಕಮ್ಯುನಿಕೇಶನ್ ಸಂಸ್ಥೆಯೂ ಶುಭಾರಂಭಗೊಂಡಿದೆ ಎಂದು ಸಂಸ್ಥೆಯ ಮಾಲಕರಾದ ವಿದ್ಯುತ್ ಗುತ್ತಿಗೆದಾರರೂ ಆಗಿರುವ ಮಹಮ್ಮದ್ ತಾಜು ತಿಳಿಸಿದ್ದಾರೆ.