ಬಡಗನ್ನೂರು: ಬಡಗನ್ನೂರು ಗ್ರಾ.ಪಂ ನಲ್ಲಿ ಸಂವಿಧಾನ ಸಂಭ್ರಮಾಚರಣೆ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನ.27 ರಂದು ನಡೆಯಿತು.
ಮಹಾತ್ಮ ಗಾಂಧಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಬಳಿಕ ಸಂವಿಧಾನದ ಪೀಠಿಕೆ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕೊಯಿಲ ಬಡಗನ್ನೂರು ಶಾಲಾ ಶಿಕ್ಷಕಿ ಸೌಮ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಕಡೆಯಲ್ಲೂ ಸಂವಿಧಾನ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಗ್ರಾ.ಪಂ ಸದಸ್ಯ ಕುಮಾರ ಅಂಬಟೆಮೂಲೆ, ಹಾಗೂ ಅಭಿವೃದ್ಧಿ ಕೆ.ಪಿ ಸುಬ್ಬಯ್ಯ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ರವಿಚಂದ್ರ ಸಾರೆಪ್ಪಾಡಿ ,ವೆಂಕಟೇಶ್ ಕನ್ನಡ್ಕ ವಿವಿಧ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾ.ಪಂ. ಸಿಬ್ಬಂದಿಗಳು, ಸಂಜೀವಿನಿ ತಂಡದ ಸದಸ್ಯರು, ಪಶು ಸಕಿಯರು ಭಾಗವಹಿಸಿದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೆ.ಪಿ ಸುಬ್ಬಯ್ಯ ಸ್ವಾಗತಿಸಿ,ವಂದಿಸಿದರು. ಸಿಬ್ಬಂದಿ ಸಹಕರಿಸಿದರು.
ಶಾಲಾ ಮಕ್ಕಳಿಗೆ ರಸಪ್ರಶ್ನೆ;-
ಪಟ್ಟೆ ಪ್ರತಿಭಾ ಪ್ರೌಢಶಾಲೆ, ಬಡಗನ್ನೂರು ಪ್ರೌಢ ಶಾಲೆ, ಕೊಯಿಲ ಬಡಗನ್ನೂರು ಹಿ.ಪ್ರಾಥಮಿಕ ಶಾಲೆ ,ಬಡಗನ್ನೂರು ಹಿರಿಯ ಪ್ರಾಥಮಿಕ ಶಾಲೆ, ಪಡುಮಲೆ ಸ.ಹಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆ ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ರಸ ಪ್ರಶ್ನೆ ನಡೆಸಲಾಯಿತು.ಕೊಯಿಲ ಬಡಗನ್ನೂರು ಸ.ಹಿ.ಪ್ರಾ.ಶಾಲೆ ಪ್ರಥಮ, ಬಡಗನ್ನೂರು ಸ.ಹಿ.ಪ್ರಾ.ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡರು. ವಿಜೇತ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.