ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಒಟ್ಟು 65 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ ವಿವಿಧ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ದಿಗೆ ಈ ಅನುದಾನವನ್ನು ಒದಗಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗಿದೆ.
ಎಲ್ಲೆಲ್ಲಿಗೆ ಅನುದಾನ?
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ 5 ಲಕ್ಷ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಕುಟ್ಯಮಡ್ಕ ಶ್ರೀ ಕೊರಗು ತನಿಯ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ 3 ಲಕ್ಷ, ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಜಾರತ್ತಾರು ಶ್ರೀ ಮಹಾಮಾರಿಯಮ್ಮ ದೈವಸ್ಥಾನಕ್ಕೆ 5 ಲಕ್ಷ, ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕುಂಠ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ 10 ಲಕ್ಷ, ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಶ್ರೀ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಸ್ಥಾನ , ಸಂತೋಷನಗರ 5 ಲಕ್ಷ, ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಸ್ಥಾನ 8 ಲಕ್ಷ, ಸರ್ವೆ ಗ್ರಾಮದ ಶ್ರೀ ಆದಿಮೊಗೆರ್ಕಳ ಗರಡಿ ಕಲ್ಪಣೆ 10 ಲಕ್ಷ, ಉಪ್ಪಿನಂಗಡಿ ಗ್ರಾಮದ ಶ್ರೀ ಸತ್ಯಸಾರಾಮಣಿ ಪರಿವಾರ ದೈವಸ್ಥಾನದ ಅಭಿವೃದ್ದಿಗೆ 5 ಲಕ್ಷ, ನೆಕ್ಕಿಲಾಡಿ ಗ್ರಾಮದ ಶ್ರೀಗುರುರಾಘವೇಂದ್ರ ಮಠಕ್ಕೆ 9 ಲಕ್ಷ ರೂ ಅನುದಾನ ಬಿಡುಗಡೆಯಗಿರುತ್ತದೆ.
ರಾಜ್ಯ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಮತ್ತು ಪುತ್ತೂರು ತಾಲೂಕು ವ್ಯಾಪ್ತಿಯ ಒಟ್ಟು 9 ಹಿಂದೂ ಧಾರ್ಮಿಕ ಕೇಂದ್ರಗಳಿಗೆ 65 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ಪಂಚ ಗ್ಯಾರಂಟಿಯನ್ನು ನೀಡಿ ಬಡವರ ಮನೆಯನ್ನು ಬೆಳಗಿಸಿದೆ. ಇದೀಗ ಜನರ ನಂಬಿಕೆಯ ಧಾರ್ಮಿಕ ಕೇಂದ್ರಗಳಿಗೂ ಅನುದಾನವನ್ನು ನೀಡುವ ಮೂಲಕ ಶ್ರದ್ದಾಕೇಂದ್ರದ ಅಭಿವೃದ್ದಿಗೆ ಅನುದಾನ ಒದಗಿಸುವ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಸರಕಾರ ಜನರ ಹಿತ ಕಾಯುವಲ್ಲಿ ಸಫಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಕೆಂದ್ರಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು
ಅಶೋಕ್ ರೈ, ಶಾಸಕರು ಪುತ್ತೂರು