ಪುತ್ತೂರು: ಮಾಡನ್ನೂರು ಗ್ರಾಮದ ಅಂಕುತ್ತಿಮಾರ್, ಕೊಚ್ಚಿ ಮತ್ತು ಅಮ್ಚಿನಡ್ಕದ ಮಳಿ ಪ್ರದೇಶದಲ್ಲಿ ಕಳೆದ ರಾತ್ರಿ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡಿದೆ. ಇಲ್ಲಿನ ಸ್ಥಳೀಯರಾದ ಮೊೖದು ಕೊಚ್ಚಿ, ಅಬ್ದುಲ್ ರಹಿಮಾನ್ ಕೊಚ್ಚಿ, ಲತೀಫ್ ತೋಟದ ಮೂಲೆ ಎಂಬವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಗೆ ಹಾನಿ ಮಾಡಿದ್ದು, ಅಪಾರ ನಷ್ಟ ಸಂಭವಿಸಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿ ಕಾಡಾನೆಯಿಂದ ಆಗುತ್ತಿರುವ ತೊಂದರೆ ಮತ್ತು ಹಾನಿಯನ್ನು ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಅಮ್ಚಿನಡ್ಕ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕರಿ – ಕೃಷಿಗೆ ಹಾನಿ- ಕ್ರಮಕ್ಕೆ ಒತ್ತಾಯ