ಮಂಗಲ್ ಸ್ಟೋರ್ಸ್ ವತಿಯಿಂದ ಗ್ರಾಹಕರಿಗೆ ‘ಗ್ರೇಟ್ ಡೀಲ್’ ಡಿಸ್ಕೌಂಟ್ ಕೂಪನ್!

0

ನೀವು ನಿಮ್ಮ ವಾಹನಗಳಿಗೆ ಹಾಕಿಸುವ ಇಂಧನದಲ್ಲಿ ಒಂದು ರೂ. ಡಿಸ್ಕೌಂಟ್ ಬೇಕಾದಲ್ಲಿ ಹೀಗೆ ಮಾಡಿ..!

ಪುತ್ತೂರು: ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್ ಅವರ ಮಾರ್ಗದರ್ಶನದೊಂದಿಗೆ ಕಳೆದ ಎರಡು ದಶಕಗಳಿಂದ ಪುತ್ತೂರು ಸುತ್ತಮುತ್ತಲಿನ ಜನರಿಗೆ ತಮ್ಮ ಮೂರು ವಿಭಿನ್ನ ಮಳಿಗೆಗಳ ಮೂಲಕ ಅತ್ಯುತ್ತಮ ಸೇವೆಗಳನ್ನೊದಗಿಸುತ್ತಾ ಹತ್ತೂರಲ್ಲೂ ಮನೆಮಾತಾಗಿರುವ ಮಂಗಲ್ ಸ್ಟೋರ್ಸ್ ತನ್ನ ಉತ್ಪನ್ನಗಳ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯ ಮೂಲಕ ಈಗಾಗಲೇ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ.


ಇದೀಗ ತಮ್ಮ ಸಂತೃಪ್ತ ಗ್ರಾಹಕರಿಗೆ ಮಂಗಲ್ ಸ್ಟೋರ್ಸ್ ವತಿಯಿಂದ ‘ಗ್ರೇಟ್ ಡಿಲ್’ ಹೆಸರಿನ ರಿಯಾಯಿತಿ ಕೂಪನ್ ಅನ್ನು ಪರಿಚಯಿಸಲಾಗಿದ್ದು, ಇದರ ಬಿಡುಗಡೆ ಕಾರ್ಯಕ್ರಮವು ಇಂದು ನಡೆಯಿತು. ಈ ‘ಗ್ರೇಟ್ ಡೀಲ್’ ಡಿಸ್ಕೌಂಟ್ ಕೂಪನನ್ನು ಸಂಜೀವಿನಿ ಫ್ಯೂಯಲ್ಸ್ ನ ಮಾಲಕರಾದ ದೇರ್ಕಜೆ ವೆಂಕಟರಮಣ ಭಟ್ ಅವರು ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕರಾದ ಎಸ್.ಕೆ. ಆನಂದ ಕುಮಾರ್ ಹಾಗೂ ಇನ್ನಿತರ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಏನಿದು ‘ಗ್ರೇಟ್ ಡೀಲ್’..? – ಏನೇನು ಸಿಗ್ತದೆ ಇದ್ರಲ್ಲಿ..!?
ಮಂಗಲ್ ಸ್ಟೋರ್ಸ್ ತಮ್ಮ ಗ್ರಾಹಕರಿಗಾಗಿ ಪರಿಚಯಿಸಿರುವ ಈ ‘ಗ್ರೇಟ್ ಡೀಲ್’ ಡಿಸ್ಕೌಂಟ್ ಕೂಪನ್ ನಲ್ಲಿ, ಗ್ರಾಹಕರು ಮಂಜಲ್ಪಡ್ಪು, ಜಿ.ಎಲ್. ವನ್ ಮಾಲ್, ಎಪಿಎಂಸಿ ಆವರಣದಲ್ಲಿರುವ ಮಂಗಲ್ ಸ್ಟೋರ್ಸ್ ಮಳಿಗೆಗಳಲ್ಲಿ ಹಾಗೂ ರಸಗೊಬ್ಬರ ಮತ್ತು ಪಶು ಆಹಾರ ಮಳಿಗೆ ರೈತ ಮಿತ್ರದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಗ್ರಾಹಕರಿಗೆ ಈ ‘ಗ್ರೇಟ್ ಡೀಲ್’ ಕೂಪನ್ ನೀಡಲಾಗುವುದು. ಈ ಕೂಪನ್ ಮೂಲಕ ನೆಹರು ನಗರದಲ್ಲಿರುವ ‘ಸಂಜೀವಿನಿ ಫ್ಯೂಯೆಲ್ಸ್ ನಲ್ಲಿ ಪೆಟ್ರೋಲ್ ಅಥವಾ ಡಿಸೇಲ್ ಹಾಕಿಸಿದಲ್ಲಿ ಪ್ರತೀ ಲೀಟರ್ ಗೆ ಒಂದು ರೂಪಾಯಿ ಡಿಸ್ಕೌಂಟ್ ದೊರೆಯಲಿದೆ. ಈ ಕೂಪನ್ ನ ಅವಧಿ ಒಂದು ವಾರಕ್ಕೆ ಸೀಮಿತವಾಗಿದ್ದು, 2 ವೀಲರ್, 3 ವೀಲರ್ ಮತ್ತು 4 ವೀಲರ್ ವಾಹನಗಳಿಗೆ ಹಾಕಿಸುವ ಪೆಟ್ರೋಲ್/ಡಿಸೇಲ್ ಗಳಿಗೆ ಮಾತ್ರವೇ ಈ ಆಫರ್ ಅನ್ವಯವಾಗುತ್ತದೆ.

ಈ ಸಂದರ್ಭದಲ್ಲಿ ದೇರ್ಕಜೆ ನರೇಶ್, ಮಾಸ್ಟರ್ ಪ್ಲಾನರಿಯ ಹಿರಿಯರಾದ ಪ್ರಭಾಕರ್, ಚಂದ್ರಶೇಖರ್, ನವೀನ್ ನಾಯಕ್ ಮಂಗಲ್ ಸ್ಟೋರ್ಸ್ ನ ನಿರ್ದೇಶಕರಾದ ಸುದರ್ಶನ್ ನಾಯಕ್, ಮುಕ್ತ ಬಾಯಿ, ಅರುಣಾ ನಾಯಕ್, ಲಕ್ಷ್ಮೀ ನಾಯಕ್, ತಿಮ್ಮಪ್ಪಯ್ಯ, ನವೀನ ಚಂದ್ರಶೇಖರ್ ಹಾಗೂ ಮಂಗಲ ಸ್ಟೋರ್ಸ್ ನ ಸಿಬ್ಬಂದಿ ಬಳಗದವರು ಉಪಸ್ಥಿತರಿದ್ದರು.

ರಾಘವೇಂದ್ರ ನಾಯಕ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

LEAVE A REPLY

Please enter your comment!
Please enter your name here