ಡಿ.7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ – ಸವಣೂರು ಕೆ.ಸೀತಾರಾಮ ರೈ ಸಹಿತ 12 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

0

ಪುತ್ತೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಂಬಯಿ ಬಂಟರ ಸಂಘದ ಸಹಯೋಗದಲ್ಲಿ ಮುಂಬಯಿಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಡಿ.7ರಂದು ನಡೆಯುವ ಜಾಗತಿಕ ಮಟ್ಟದ “ವಿಶ್ವ ಬಂಟರ ಸಮಾಗಮ’ ಬೃಹತ್ ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ ಮತ್ತು ಸಹಕಾರಿ ದುರಿಣಾ ಸವಣೂರು ಕೆ ಸೀತಾರಾಮ ರೈ ಸಹಿತ 12 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು.

ಮುಂಬಯಿಯಲ್ಲಿ 3 ವರ್ಷಗಳ ಹಿಂದೆ ಒಕ್ಕೂಟದ ಬಂಟ ಸಮ್ಮಿಲನ ನಡೆದಿತ್ತು. ಈ ವರ್ಷ ಮುಂಬಯಿಯಲ್ಲಿ ಜಾಗತಿಕ ಮಟ್ಟದ ಬಂಟರನ್ನು ಒಟ್ಟು ಸೇರಿಸುವ ಉದ್ದೇಶದೊಂದಿಗೆ ಬೆಳಗ್ಗಿನಿಂದ ಸಂಜೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆ.ಸೀತಾರಾಮ ರೈ ಸವಣೂರು, ಚಲನಚಿತ್ರ ಇಂಡಸ್ಟ್ರೀಸ್ ವಿಭಾಗದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಹೊಟೇಲ್ ಉದ್ಯಮದಲ್ಲಿ ಸುಧಾಕರ್ ಹೆಗ್ಡೆ ಮತ್ತು ರಘುರಾಮ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಡಾ. ಪಿ.ವಿ. ಶೆಟ್ಟಿ, ಮಾದ್ಯಮ ಕ್ಷೇತ್ರದಲ್ಲಿ ರಾಕೇಶ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಕೆ.ಕೆ.ಶೆಟ್ಟಿ, ಧಾರ್ಮಿಕ ಕ್ಷೇತ್ರದಲ್ಲಿ ಅಣ್ಣಿ ಸಿ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿಜೇತ ಎಸ್ ಶೆಟ್ಟಿ, ಧಾರ್ಮಿಕ ಕ್ಷೇತ್ರದಲ್ಲಿ ಭಾಸ್ಕರ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ, ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ| ಕೆ. ಪ್ರಕಾಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here