ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್ ಚಾಂಪಿಯನ್ ಶಿಪ್- ರಜತ್‌ ರೈ ಗೆ ಚಿನ್ನದ ಪದಕ

0

ಪುತ್ತೂರು: ಆಂಧ್ರ ಪ್ರದೇಶದ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ SDM College ಉಜಿರೆಯ ವಿದ್ಯಾರ್ಥಿ ರಜತ್‌ ರೈ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಿ 81ಕೆ.ಜಿ ವಿಭಾಗದಲ್ಲಿ ಒಟ್ಟು 301 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.

ಹಾಗೂ ಜನವರಿಯಲ್ಲಿ lovely professional university ಪಂಜಾಬ್ ಇಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿದಿಸಲಿದ್ದಾರೆ.

ಇವರು ಇರ್ದೆಯ ರತ್ನಾಕರ ರೈ ಮತ್ತು ಶಶಿಕಲಾ ದಂಪತಿಗಳ ಪುತ್ರ.SDM Sports Clubನ ರಮೇಶ್ H ಕ್ರೀಡಾ ನಿರ್ದೇಶಕರು ಮತ್ತು ಸಂತೋಷ್ ಇವರು ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here