ಪುತ್ತೂರು: ಶ್ರೀರಾಮ್ ಲೈಫ್ ಇನ್ಶೂರೆನ್ಸ್ ನೂತನ ಶಾಖೆಯು ಬೊಳುವಾರಿನ ಮಯೂರ್ ಇನ್‌ಲ್ಯಾಂಡ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಡಿ.6ರಂದು ಉದ್ಘಾಟನೆಗೊಂಡಿತು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು. ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್, ರಾಮಣ್ಣ ಗೌಡ ತೆಂಕಿಲ, ಎಮ್‌ಎಮ್‌ಸಿ ಬಿಲ್ಡರ್ ಮಂಗಳೂರು ಇದರ ಮಹಾಬಲ ಮುನ್ನೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೀಜಿನಲ್ ಮ್ಯಾನೇಜರ್ ವಿಶ್ವಾಸ್ ನಾಯಕ್, ಎರಿಯ ಮ್ಯಾನೇಜರ್ ಶ್ರವಣ್ ಕುಮಾರ್ ಕೆ, ಲೊಕೇಶನ್ ಮ್ಯಾನೇಜರ್ ಹರ್ಷನಾಥ್, ರಾಮಣ್ಣ ಗೌಡ ತೆಂಕಿಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.