ಪುತ್ತೂರು: ಕಾರುಗಳ ಸರ್ವೀಸ್‌ಗೆ ಸಂಬಂಧಿಸಿದ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಎಕ್ಸ್‌ಕ್ಲೂಸಿವ್ ಶೋರೂಂ ಅರಸು ಡಿಟೇಲಿಂಗ್ ಕೆಫೆ ದರ್ಬೆ ಕೂರ್ನಡ್ಕ ಕೆಮ್ಮಿಂಜೆ ದೇವಸ್ಥಾನದ ದ್ವಾರದ ಬಳಿ ಡಿ.6ರಂದು ಶುಭಾರಂಭಗೊಂಡಿತು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಯುವ ಉದ್ಯಮಿ ಸಹಜ್ ಜೆ. ರೈ ಬಳಜ್ಜ, ರಾಜೇಶ್ ಬನ್ನೂರು, ದೇರ್ಕಜೆ ನರೇಶ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ವಿಶಾಲಾಕ್ಷಿ ಬನ್ನೂರು, ಶುಭ ಮಾಲಿನಿ, ಮಲ್ಲಿ, ವಿಜೆ ವಿಖ್ಯಾತ್, ಮನೀಷ್ ಕುಲಾಲ್ ಮತ್ತಿತರರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು. ಮಾಲಕರಾದ ಸರ್ವೇಶ್ ರಾಜ್ ಮತ್ತು ಹೇಮಂತ್ ಪೂಜಾರಿಯವರು ಅತಿಥಿ ಅಭ್ಯಾಗತರನ್ನು ಸತ್ಕರಿಸಿದರು. ಮಾಲಕರ ತಾಯಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಶಾರದಾ ಅರಸ್ ಸ್ವಾಗತಿಸಿದರು.
ಡಿಟೇಲ್ಡ್ ವಾಶ್ ಹೇಗಿರುತ್ತೆ ?
ಸಿರಾಮಿಕ್ ಕೋಟಿಂಗ್, ಪಿಪಿಎಫ್, ಡಿಟೇಲಿಂಗ್ ವಾಶ್, ಫೋಮ್ ವಾಶ್, ಇಂಟೀರಿಯಲ್ ಕ್ಲೀನಿಂಗ್, ವ್ಯಾಕ್ಸ್ ಪಾಲಿಶ್, ಆಕ್ಸಸರೀಸ್ ಎಲ್ಲಾ ರೀತಿಯ ಸರ್ವೀಸ್ ಇದೆ. ಯಾವುದೇ ರೀತಿಯ ಕಾರುಗಳ ಸರ್ವೀಸ್ ಕೂಡಾ ನಮ್ಮಲ್ಲಿದೆ. ಅಲ್ಲದೇ ಉಚಿತವಾಗಿ ಪಿಕಪ್ ಮತ್ತು ಡೆಲಿವರಿ ವ್ಯವಸ್ಥೆ ಕೂಡಾ ಇದೆ. ನಮ್ಮಲ್ಲಿ ನಾರ್ಮಲ್ ವಾಶ್‌ಗಿಂತ ವಿಭಿನ್ನವಾಗಿ ಡಿಟೇಲ್ಡ್ ವಾಶ್ ಅಂತ ಮಾಡುತ್ತಿದ್ದೇವೆ. ವಾಹನದ ಕಂಪ್ಲೀಟ್ ಎಡ್ಜ್, ವ್ಹೀಲ್ ಇನ್ನಿತರ ಪಾರ್ಟ್‌ಗಳ ಸೂಕ್ಷ್ಮ ಡಿಟೇಲ್ಡ್ ವಾಶ್ ಇರುತ್ತದೆ. ಹೆಡ್‌ಲೈಟ್ ಪಾಲಿಶ್, ಗ್ಲಾಸ್ ಪಾಲಿಶ್, ಸೆಕೆಂಡ್ ಹ್ಯಾಂಡ್ ಸೇಲ್ಸ್, ರೆಂಟಲ್ ಕಾರುಗಳು ಕೂಡಾ ಲಭ್ಯವಿದೆ ಎಂದು ಸಂಸ್ಥೆಯ ಮ್ಹಾಲಕರಾದ ಸರ್ವೇಶ್ ರಾಜ್ ಮತ್ತು ಹೇಮಂತ್ ಪೂಜಾರಿ ತಿಳಿಸಿದರು.
ಪುತ್ತೂರಿಗೆ ಅತ್ಯಂತ ಅವಶ್ಯಕವುಳ್ಳ ಸರ್ವೀಸ್ ಸ್ಟೇಷನ್. ಒಳ್ಳೆಯ ಸೇವೆಯನ್ನು ಕೊಡುವ ಶಕ್ತಿಯನ್ನು ಮಹಾಲಿಂಗೇಶ್ವರ ದೇವರು ಕರುಣಿಸಲಿ. –
ಅರುಣ್ ಕುಮಾರ್ ಪುತ್ತಿಲ, ಹಿಂದು ಸಂಘಟನೆಗಳ ಮುಖಂಡ
ನಿಮ್ಮ ಸರ್ವೀಸ್ ಚೆನ್ನಾಗಿರಲಿ. ಪುತ್ತೂರಿನ ಜನತೆ ನಿಮ್ಮಲ್ಲಿ ಸೇವೆ ಮಾಡಿಕೊಂಡು ಹೋಗುವಂತಾಗಲು ಮಹಾಲಿಂಗೇಶ್ವರ ದೇವರು ನಿಮ್ಮ ಜೊತೆಗೆ ಸದಾ ಇರಲಿ. ಉತ್ತಮ ಹೆಸರು, ಲಾಭ ಕೊಡಲಿ. ಎಲ್ಲರ ಆತ್ಮೀಯತೆಯನ್ನು ಉಳಿಸಿಕೊಳ್ಳುವಂತಾಗಲಿ.
ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕರು
ಪುತ್ತೂರು ಆಧುನಿಕವಾಗಿ ಬೆಳೆಯುತ್ತಿರುವ ಪ್ರದೇಶ. ಆಲ್ ಇನ್ ಒನ್ ಎಲ್ಲಾ ರೀತಿಯ ಸೇವೆ ಹೊಂದಿರುವ ವ್ಯವಸ್ಥೆ ತುಂಬಾ ಅವಶ್ಯಕತೆಯಿತ್ತು. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತಾಗಲಿ. ಆರಾಧ್ಯಮೂರ್ತಿ ಮಹಾಲಿಂಗೇಶ್ವರನ ಕೃಪೆಯಿಂದ ಯಶಸ್ಸು ಕಾಣಲಿ.
– ಸಹಜ್ ಜೆ. ರೈ ಬಳಜ್ಜ ಯುವ ಉದ್ಯಮಿ
ಸರ್ವೀಸ್ ಸ್ಟೇಷನ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ. ಈ ಯುವಕರು ಕೆಲವು ವರ್ಷಗಳಿಂದ ಸರ್ವೀಸ್ ಸ್ಟೇಷನ್ ಮಾಡಿಕೊಂಡು ಬರುತ್ತಿದ್ದಾರೆ. ಈಗ ಆಧುನಿಕ ಯುಗಕ್ಕೆ ಬೇಕಾದ ರೀತಿಯಲ್ಲಿ ಮತ್ತಷ್ಟು ಉತ್ತಮ ಸೇವೆ ಹೊಂದಿರುವ ಸರ್ವೀಸ್ ಸ್ಟೇಷನ್ ಮಾಡಿದ್ದಾರೆ. ಉಳ್ಳಾಲ್ತಿ ಅಮ್ಮ ಮತ್ತು ಮಹಾಲಿಂಗೇಶ್ವರನ ಕೃಪೆ ಇವರ ಮೇಲಿರಲಿ ಎಂದು ಆಶಿಸುತ್ತೇನೆ. – ರಾಜೇಶ್ ಬನ್ನೂರು ನಗರಸಭಾ ಮಾಜಿ ಸದಸ್ಯರು