ವಿಟ್ಲ: ಶಾಲಾ ಬಾಲಕಿಯೋರ್ವರು ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಮದಕ ಎಂಬಲ್ಲಿ ಡಿ.8ರಂದು ನಡೆದ ಕುರಿತು ವರದಿಯಾಗಿದೆ.
ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಮದಕ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥ ಶ್ರೀ(10 ವ.) ಮೃತ ಬಾಲಕಿ. ಡಿ.8ರಂದು ಮನೆ ಪಕ್ಕ ಆಟವಾಡುತ್ತಿದ್ದ ತೀರ್ಥ ಶ್ರೀ ರವರು ಆ ಬಳಿಕ ಮನೆಯೊಳಗೆ ತೆರಳಿದ್ದರು. ಅಲ್ಪ ಹೊತ್ತಿನ ಬಳಿಕ ಪೋಷಕರು ಮನೆಯೊಳಗೆ ತೆರಳಿ ನೋಡಿದಾಗ ತೀರ್ಥ ಶ್ರೀ ರವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯೊಳಗಡೆ ಬಟ್ಟೆ ಹಾಕಲು ಹಾಕಿದ ಸ್ಟೀಲ್ ರಾಡ್‌ಗೆ ಚಡ್ಡಿಯ ಲಾಡಿ (ಹಗ್ಗದಿಂದ) ಕುಣಿಕೆ ಮಾಡಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೂಡಲೇ ಅವರನ್ನು ಕೆಳಗಿಳಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮೃತ ಬಾಲಕಿಯ ತಂದೆ ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕಿ ಬುಡೋಳಿ ಶೇರ ಸ.ಹಿ.ಪ್ರಾ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಮಹಜರಿಗಾಗಿ ಕೊಂಡೊಯ್ಯಲಾಗಿದೆ.