‘ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ’-ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು- ನಿಲ್ದಾಣದ ತನಕ ಅವಕಾಶ ಕೊಡಿ: ಶಾಸಕರ ಸೂಚನೆ

0

ಪುತ್ತೂರು: ನಾವು ಉಪ್ಪಿನಂಗಡಿಯಿಂದ ವಿಟ್ಲ ಐಟಿಐ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದೇವೆ, ನಮಗೆ ಬೊಳುವಾರಿನಿಂದ ವಿಟ್ಲ ಎಂದು ಬಸ್ ಪಾಸ್ ಕೊಟ್ಟಿದ್ದಾರೆ. ಮನೆಯಿಂದ ಕಾಲೇಜಿಗೆ ಬರುವಾಗ ನಾವು ಬೊಳುವಾರಿನಲ್ಲೇ ಇಳಿಯಬೇಕು , ಕಾಲೇಜು ಮುಗಿಸಿ ಬರುವಾಗಲೂ ನಾವು ಬೊಳುವಾರಿನಲ್ಲೇ ಇಳಿಯಬೆಕು. ಬೊಳುವಾರಿನಲ್ಲಿ ಇಳಿದರೆ ನಮಗೆ ಬಸ್ ಸಿಗುವುದಿಲ್ಲ ನಮಗೆ ಬಸ್ ಸ್ಟ್ಯಾಂಡ್ ವರೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.

ವಿಟ್ಲದ ಐಟಿಐ ಕಾಲೇಜಿನಲ್ಲಿ ಕಾಮಗಾರಿ ಶಂಕುಸ್ಥಾಪನೆಗೆ ತೆರಳಿದ ವೇಳೆ ವಿದ್ಯಾರ್ಥಿಗಳು ಶಾಸಕರಲ್ಲಿ ಈ ಬಗ್ಗೆ ದೂರು ಸಲ್ಲಿಸಿದರು. ಬಸ್ ನಿಲ್ದಾಣದಲ್ಲೇ ಇಳಿಸಬೇಕು ಎಂದು ನಾವು ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಿದ್ದೇವು ಅವರು ನಮಗೆ ಪತ್ರವೊಂದಕ್ಕೆ ಸಹಿ ಮಾಡಿ ಓಕೆ ಎಂದು ಹೇಳಿದ್ದಾರೆ. ಆದರೆ ಬಸ್ ನಿರ್ವಾಹಕ ನಮ್ಮನ್ನು ನಿಲ್ದಾಣದವರೆಗೆ ಕೊಂಡೊಯ್ಯುತ್ತಿಲ್ಲ ನಮ್ಮನ್ನು ಬೊಳುವಾರಿನಲ್ಲೇ ಇಳಿಸಬೇಕು ಇಳಿಯದೇ ಇದ್ದರೆ ಬಲವಂತವಾಗಿ ಇಳಿಸುತ್ತಾರೆ ಇದು ನಮಗೆ ಸಮಸ್ಯೆಯಾಗಿದೆ ಎಂದು ಹೇಳಿದರು. ನಮಗೆ ಬಸ್ ನಿಲ್ದಾಣದ ವರೆಗೆ ಬಸ್ ಪಾಸ್ ಕೊಡಿ ಎಂದು ಪ್ರಾರಂಭದಲ್ಲೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ನಿಲ್ದಾಣದ ತನಕ ಅವಕಾಶ ಕೊಡಿ: ಶಾಸಕರ ಸೂಚನೆ

ಉಪ್ಪಿನಂಗಡಿಯಿಂದ ಬರುವ ವಿದ್ಯಾರ್ಥಿಗಳಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ವಿಟ್ಲ ಬಸ್ ಪಿಕಪ್ ಮಾಡುವುದು ಮತ್ತು ವಿಟ್ಲದಿಂದ ನಿಲ್ದಾಣದ ವರೆಗೆ ಬಂದು ಉಪ್ಪಿನಂಗಡಿ ಬಸ್ ಹತ್ತುವಲ್ಲಿ ಕ್ರಮಕೈಗೊಳ್ಳಿ ಎಂದು ಡಿಪೋ ಮ್ಯಾನೇಜರ್‌ಗೆ ಸೂಚನೆಯನ್ನು ನೀಡಿದ್ದಾರೆ. ಬೊಳುವಾರಿನಲ್ಲಿ ಇಳಿಸಿದರೆ ಅಲ್ಲಿಂದ ಮತ್ತೆ ವಿಟ್ಲಕ್ಕೆ ತೆರಳುವಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಗುತ್ತಿದೆ ಇದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಶಾಸಕರು ಸ್ಪಂದಿಸಿದ್ದಾರೆ: ವಿದ್ಯಾರ್ಥಿ

ನಮ್ಮ ತೊಂದರೆಯ ಬಗ್ಗೆ ಶಾಸಕ ಅಶೋಕ್ ರೈ ಅವರಿಗೆ ತಿಳಿಸಿದ್ದೇವೆ, ನಮ್ಮ ಕಾಲೇಜಿನಿಂದಲೇ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಸೂಚನೆಯನ್ನು ನೀಡಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆಗಳು

ವಿನೋದ್, ಐಟಿಐ ವಿದ್ಯಾರ್ಥಿ

LEAVE A REPLY

Please enter your comment!
Please enter your name here