ಪುತ್ತೂರು: ನೆಹರುನಗರದಲ್ಲಿನ ಸುದಾನ ವಸತಿಯುತ ಶಾಲೆಯ ವಾರ್ಷಿಕ ಕ್ರೀಡಾಕೂಟವು ಡಿ.10 ರಂದು ಶಾಲಾ ಕ್ರೀಡಾಂಗಣದಲ್ಲಿ ಜರಗಲಿದೆ.
ವಿಶ್ವ ಜೀವರಕ್ಷಕ ಚಾಂಪಿಯನ್‌ಶಿಪ್ 2024(ಸರ್ಫ್ ಬೋಟ್ ರೇಸ್) ಇದರ ಅಂತರ್ರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಸ್ವೀಕೃತ್ ಆನಂದ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭ ಜರಗಲಿದ್ದು, ಮುಖ್ಯ ಅತಿಥಿಗಳಾಗಿ ವರುಣ್ಸ್ ಬ್ಯಾಡ್‌ಮಿಂಟನ್ ಅಕಾಡೆಮಿ ಪುತ್ತೂರು ಇದರ ರಾಜ್ಯ ಬ್ಯಾಡ್ಮಿಂಟನ್ ಆಟಗಾರ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ವರುಣ್ ಪಿ.ಎಚ್.ರವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜುರವರು ಉಪಸ್ಥಿತಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.