ರೋಮಾಂಚಕ ಬಣ್ಣ, ಅತ್ಯುತ್ತಮ ಚಿತ್ರ ಸ್ಪಷ್ಟತೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೆಳುವಾದ ಟಿವಿಯನ್ನು ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು. ಆದರೆ ಇದು ನಿಜ.
ಬ್ರ್ಯಾಂಡೆಡ್ ಹೆಸರಿನಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಭರಿತ ಟಿವಿಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಿರುವ ಬಹುಕೋಟಿ ಕಂಪೆನಿಗಳ ನಡುವೆ ಕೆಲವೊಂದು ಸಣ್ಣ ಕಂಪೆನಿಗಳು ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. ಇಂತಹ ಉದ್ದಿಮೆಗಳ ಪೈಕಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಟಿವಿ ಕೂಡಾ ಒಂದು.
ಪುತ್ತೂರು ನಗರಸಭಾ ವ್ಯಾಪ್ತಿಯ ಸಂಪ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ ಟಿವಿ ಮಾರುಕಟ್ಟೆ ವಿತರಣೆ, ಗ್ರಾಹಕ ಸೇವೆ ಮತ್ತು ಮಾರಾಟ ನಂತರದ ಸೇವೆವರೆಗೆ ಎಲ್ಲವನ್ನೂ ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಗ್ರಾಹಕರ ಆದ್ಯತೆ ಅನುಸಾರ ತಯಾರಿಸಲಾದ ಈ ಟಿವಿಗಳು ಅಸಾಧಾರಣ ಮೌಲ್ಯ ಮತ್ತು ಕಾರ್ಯಕ್ಷಮತೆಯನ್ನು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ರ್ಯಾಂಡೆಡ್ ಟಿವಿಗಳಂತೆ ಎಲ್ಲಾ ಮಾನದಂಡವನ್ನು ಸ್ಟಾರ್ ಟಿವಿ ಹೊಂದಿದ್ದು, ಪರಿಣಿತಿ ಎದ್ದು ಕಾಣುತ್ತಿದೆ.
4ಕೆ, ಎಲ್‌ಇಡಿ, ಗೂಗಲ್, ಸ್ಮಾರ್ಟ್ ಅನ್‌ಬ್ರೇಕೆಬಲ್, ವೆಬೋಸ್ ಟಿವಿಗಳನ್ನು ಟ್ರೆಂಡ್ ಅನುಸಾರ ಮೌಲ್ಯ ಮತ್ತು ಉತ್ತಮ ಕಾರ್ಯಕ್ಷಮತೆಯ ಗುರಿಯೊಂದಿಗೆ ಉತ್ತಮ ಪ್ರೊಸೆಸರ್, ಮೆಮೋರಿ ವ್ಯವಸ್ಧೆಯೊಂದಿಗೆ ಬೇಡಿಕೆಗೆ ತಕ್ಕಂತೆ ನಿರ್ಮಿಸಲಾಗುವ ಈ ಸ್ಟಾರ್ ಟಿವಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮೂಲಕ ಬಳಕೆಯ ಆನಂದವನ್ನು ಇಮ್ಮಡಿಗೊಳಿಸಿದೆ. 24, 32,43,55 ಮತ್ತು 65 ಇಂಚಿನ ಟಿವಿಗಳು ಮಾರುಕಟ್ಟೆಯಲ್ಲಿರುವ ಇತರ ಟಿವಿಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿದ್ದು, ಯಾವುದೇ ಬ್ರ್ಯಾಂಡೆಡ್ ಟಿವಿಗಳು ನೀಡುವ ಗುಣಮಟ್ಟ ಮತ್ತು ವಾರೆಂಟಿಯನ್ನು ಸ್ಟಾರ್ ಟಿವಿಯೊಂದಿಗೆ ನೀಡಲಾಗುತ್ತಿದೆ.
ಗ್ರಾಹಕರ ಆದ್ಯತೆಯನ್ನು ಪೂರೈಸುವ ಆಯ್ಕೆಯ ಇನ್ನಷ್ಟು ಶ್ರೇಣಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಇರಾದೆ ಸ್ಟಾರ್ ತಯಾರಕರಾದ್ದಾಗಿದ್ದು, ಅವರಿಗೆ ಯಶಸ್ಸು ಸಿಗಲೆಂದು ಹಾರೈಸುತ್ತೇವೆ. ನೀವೂ ಸ್ಟಾರ್ ಟಿವಿ ಡೆಮೋ ನೋಡಲು ಬಯಸಿದಲ್ಲಿ ಅಥವಾ ಖರೀದಿ ಮಾಡಲು ಬಯಸಿದಲ್ಲಿ ಸಂಪ್ಯದಲ್ಲಿರುವ ಸ್ಟಾರ್ ಟಿವಿ ಶೋರೂಂಗೆ ಭೇಟಿ ನೀಡಬಹುದಾಗಿದೆ. ಆಯ್ದ ನಗರಗಳಿಗೆ ಡೀಲರ್‌ಗಳ ಅವಶ್ಯಕತೆ ಇದ್ದು, ಹೆಚ್ಚಿನ ಮಾಹಿತಿಗಾಗಿ 9481778568 ಅಥವಾ 9880434055 ನಂಬರನ್ನು ಸಂಪರ್ಕಿಸಬಹುದಾಗಿದೆ.