ಪುತ್ತೂರು: ಬುಡೊಕಾನ್ ಕರಾಟೆ ಇವರು ಆಯೋಜಿದ 42ನೇ ರಾಷ್ಟೀಯ ಕರಾಟೆ ಚಾಂಪಿಯನ್ ಶಿಪ್-2024 ಈ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಎಂಟನೇ ತರಗತಿಯ ಲಾವಣ್ಯ (ಮುಂಡೂರು ಲವ ಕುಮಾರ್ ಮತು ನಳಿನಾಕ್ಷಿ ನಾಯಕ್ ರವರ ಪುತ್ರಿ) ವೈಯಕ್ತಿಕ ಕುಮಿಟೆ (45 ರಿಂದ 50 ಕೆಜಿ) ಗ್ರೀನ್ ಬೆಲ್ಟ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ವೈಯಕ್ತಿಕ ಕಟಾದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಕಾವು ನಾರಾಯಣ ಆಚಾರ್ ರವರು ಕರಾಟೆ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಹಾಗೂ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.