ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ 2025-26 ರಿಂದ 2029-30 ನೇ ಸಾಲಿನ 5 ವರ್ಷಗಳ ಅವಧಿಗೆ ಪುತ್ತೂರು ತಾಲೂಕಿನಲ್ಲಿ ಒಟ್ಟು 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಕೃಷಿಕ ಸಮಾಜದ ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ್ ರೈ, ದೇವಣ್ಣ ರೈ, ವಿನೋದ ಕುಮಾರ್ ರೈ, ಕೆ.ಎಸ್. ಸುಬ್ರಾಯ ಶೆಟ್ಟಿ, ವಿಜಯ ಕೃಷ್ಣ ಭಟ್, ವಿನೋದ್ ಕುಮಾರ್ ಶೆಟ್ಟಿ, ಕೆ. ಜಯಾನಂದ, ಬಿ. ಗೋವಿಂದ ಬೋರ್ಕರ್, ಮೂಲಚಂದ್ರ, ಬಾಲಕೃಷ್ಣ, ಎ.ಪಿ. ಸದಾಶಿವ, ವೈ. ರಾಮಪ್ರಸಾದರವರು ಇತ್ತೀಚೆಗೆ ದರ್ಬೆಯಲ್ಲಿರುವ ತಾಲೂಕು ಕೃಷಿ ಉಪನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.