ಮಾಡ್ನೂರು ಗ್ರಾಮದ ಪೂವಂದೂರು ಪರಿಸರದಲ್ಲಿ ಕಾಡಾನೆಗಳ ಕಾಟ

0

ಅರಿಯಡ್ಕ: ಮಾಡ್ನೂರು ಗ್ರಾಮದ ಪೂವಂದೂರು ಪರಿಸರದಲ್ಲಿ ಕಾಡಾನೆಗಳ ಹಿಂಡು ಡಿ.15 ರಂದು ಕಾಣಿಸಿಕೊಂಡಿದ್ದು,ಜನ ಭಯಭೀತರಾಗಿದ್ದಾರೆ. ಸ್ಥಳೀಯರಾದ ಸ್ವಾತಿ ಭಟ್, ನಿರ್ಮಲಾ ರಾವ್, ಮಹೇಶ್ ಪೂವಂದೂರು ಮುಂತಾದವರ‌ ತೋಟದ ಅಡಿಕೆ, ತೆಂಗು,ಬಾಳೆ‌ಗಿಡಗನ್ನು ಆನೆಗಳು ನಾಶಮಾಡಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಅರಿಯಡ್ಕ ಪಂಚಾಯತ್ ಸದಸ್ಯ ಲೋಕೇಶ್ ಚಾಕೋಟೆ, ಗಣೇಶ್ ಪೂವಂದೂರು, ಸುಂದರ ಪೂವಂದೂರು, ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಮದನ್ ಮತ್ತು‌ಅರಣ್ಯಾ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ಮಾಡಿದರು.

LEAVE A REPLY

Please enter your comment!
Please enter your name here