ಡಿ.21: ಮಂಗಳೂರಿನಲ್ಲಿ ಸಂವಿಧಾನ ಸನ್ಮಾನ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

0

ಪುತ್ತೂರಿನಿಂದ 200 ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ – ಬಿಜೆಪಿ ಪ್ರಕಟಣೆ

ಪುತ್ತೂರು: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಮಂಗಳೂರು ಇದರ ವತಿಯಿಂದ ಡಿ.21ರಂದು ಮಂಗಳೂರಿನ ಪುರಭವನದಲ್ಲಿ ನಡೆಯುವ ಸಂವಿಧಾನ ಸನ್ಮಾನ ಮತ್ತು ’ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಸುಮಾರು 200 ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾರ್ಯಕ್ರಮ ಉದ್ಘಾಟನೆ ಮತ್ತು ಪುಸ್ತಕ ಲೋಕರ್ಪಾಣೆ ಮಾಡಲಿದ್ದಾರೆ. ವಿಕಾಸ್ ಪುತ್ತೂರು ಪುಸ್ತಕ ಲೇಖಕರಾಗಿದ್ದಾರೆ. ಪುತ್ತೂರಿನಿಂದ ಗ್ರಾಮಾಂತರ ಮತ್ತು ನಗರಮಂಡಲದಿಂದ 200 ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here