(ಡಿ.22,23) ಅದೂರು ಮನೆತನ ಪರವನ್ ಕುಟುಂಬದ ತರವಾಡು ಮನೆಯ ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವ, ನೇಮೋತ್ಸವ

0

ಕೆಯ್ಯೂರು: ಅದೂರು ಮನೆತನದ ಪರವನ್ ಕುಟುಂಬದ ತರವಾಡು ಮನೆಯ ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಡಿ.22 ಹಾಗೂ ಡಿ.23ರಂದು ನಡೆಯಲಿದೆ.

ಡಿ.22ರಂದು ಬೆಳಿಗ್ಗೆ 10.15 ರಿಂದ 11.15ರ ಕುಂಭ ಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಕೆಯ್ಯೂರು ಗ್ರಾಮದ ಸಂತೋಷ್‌ನಗರ ಮಾಡಾವು ತರವಾಡಿನಲ್ಲಿ ಹೊಸದಾಗಿ ನಿರ್ಮಿಸಿದ ದೈವಸ್ಥಾನದಲ್ಲಿ ಹುಲಿಚಾಮುಂಡಿ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ವೆಂಕಟರಮಣ ದೇವರ ಹರಿಸೇವೆ ಮತ್ತು ದೈವಗಳ ನೇಮೋತ್ಸವ ನಡೆಯಲಿದೆ.

ಡಿ.21ರಂದು ಬೆಳಿಗ್ಗೆ ನಾಗತಂಬಿಲ, ರಕ್ತೇಶ್ವರಿ ತಂಬಿಲ, ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಹಸಿರುವಾಣಿ ಹೊರೆಕಾಣಿಕೆ (ಉಗ್ರಾಣ ತುಂಬಿಸುವುದು) ಸಮರ್ಪಣೆ, ಅನ್ನ ಸಂತರ್ಪಣೆ, ಸಂಜೆ ಪುಣ್ಯಾಹವಾಚನ , ಸ್ಥಳ ಶುದ್ಧಿ ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ.

ಡಿ.22ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 10.15 ರಿಂದ 11.15ರ ಕುಂಭ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ  ನಿರ್ಣಯ, ಪ್ರಸಾದ ವಿತರಣೆ, ಹರಿಸೇವೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಯಕ್ಷಗಾನ ಕಲಾವಿದ ಕುತ್ಯಾಳ ದಾಸಪ್ಪ ರೈಯವರಿಗೆ ಸನ್ಮಾನ ಕಾರ್ಯಕ್ರಮ   ನಡೆಯಲಿದೆ.  ಸಂಜೆ ದೈವಗಳ ಭಂಡಾರ ತೆಗೆಯವುದು, ಅನ್ನಸಂತರ್ಪಣೆ, ಹುಲಿಚಾಮುಂಡಿ, ಕಲ್ಲುರ್ಟಿ ದೈವಗಳು (2), ಮತ್ತು ಮಯ್ಯೂಂತಿ ದೈವಗಳ ನೇಮೋತ್ಸವ ನಡೆಯಲಿದೆ.

ಡಿ.23ರಂದು ಬೆಳಿಗ್ಗೆ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗುಳಿಗ, ಜಾವತೆ ದೈವಗಳ ನೇಮೋತ್ಸವ, ಬಳಿಕ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ನೇಮೋತ್ಸವ ನಡೆಯಲಿದೆ ಎಂದು ಪರವನ್ ಕುಟುಂಬದ ಯಜಮಾನ ಕೋಟಿಪರವ ಮಾಡಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here