ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಸಮಿತಿ ಅರಿಯಡ್ಕ, ಕೌಡಿಚಾರು, ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ದ ಪ್ರಯುಕ್ತ ಡಿ.20ರಂದು ರಾತ್ರಿ ಗಂಟೆ 9.00 ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ “ನಾಗ ಮಾಣಿಕ್ಯ” ತುಳು ಚಾರಿತ್ರಿಕ ಪೌರಾಣಿಕ ನಾಟಕ ಮೂಡಿ ಬರಲಿದೆ. ಬಾಲಕೃಷ್ಣ ಪೂಜಾರಿ ನಿರಾಲ, ಪೆರುವಾಯಿ ಸಾರಥ್ಯದ, ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ಈ ವರ್ಷದ ನೂತನ ಕಲಾಕಾಣಿಕೆ “ನಾಗ ಮಾಣಿಕ್ಯ”ಚಾರಿತ್ರಿಕ ತುಳು ನಾಟಕವು ಪ್ರಥಮ ಪ್ರದರ್ಶನದಲ್ಲಿ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ವಿನೂತನ ಶೈಲಿಯ ಅದ್ದೂರಿ ರಂಗವಿನ್ಯಾಸ ಅನೇಕ ವಿಶೇಷತೆಗಳ ಜೊತೆಗೆ ಸಂಪೂರ್ಣ ಧ್ವನಿ ಮುದ್ರಿತ ನಾಟಕವು ಮೂಡಿ ಬರಲಿದೆ. ಕಲಾಭಿಮಾನಿಗಳನ್ನು ನಾಟಕದ ಆರಂಭದಿಂದ ಕೊನೆಯವರೆಗೂ ಮೂಕ ವಿಸ್ಮಿತರಾಗಿ ಬೆರಗುಗೊಳಿಸುವ ರಂಗವಿನ್ಯಾಸ, ಕಥಾ ಹಂದರ ಈ ನಾಟಕದ ಯಶಸ್ವಿಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಯಾಪದ ಕಲಾವಿದೆರ್ ಉಬಾರ್ ತಂಡದ ಹೊಸ ಪ್ರಯತ್ನ ತುಳುರಂಗಭೂಮಿಯಲ್ಲಿ ನೂತನ ಸಂಚಲನವನ್ನು ಮೂಡಿಸಿ ಹಲವಾರು ಪ್ರದರ್ಶನಗಳತ್ತ ಮುಂದಡಿ ಇಟ್ಟಿದೆ. ತುಳು ನಾಡ ಕಲಾತಪಸ್ವಿ ರವಿಶಂಕರ ಶಾಸ್ತ್ರೀ ಪುಣಚ ಇವರ ಪರಿಕಲ್ಪನೆ ಯಲ್ಲಿ ಮೂಡಿ ಬಂದ ಚಾರಿತ್ರಿಕ ತುಳುನಾಟಕ “ನಾಗ ಮಾಣಿಕ್ಯ” ವನ್ನು ರಚಿಸಿ ನಿರ್ದೇಶನವನ್ನು ಮಾಡಿ ಅಭಿನಯಿಸಿ ಕಲಾಭಿಮಾನಿಗಳು ಬೆರಗುಗೊಳಿಸುವಂತೆ ಮಾಡಿದ್ದಾರೆ.
ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ, ಉದಯ್ ಆರ್. ಪುತ್ತೂರು ಇವರ ಸಾಹಿತ್ಯದ, ಸಂಧ್ಯಾ ಶ್ರೀ ಹಿರೇಬಂಡಾಡಿ ಇವರ ನೃತ್ಯ ಸಂಯೋಜನೆ, ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಲೈಟ್ಸ್, ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ವಿಜಯ ಶಾಂತಿನಗರ ಹರ್ಷ ಶಾಂತಿನಗರವರ ಕೈ ಚಳಕ, ಪ್ರದೀಪ್ ಕಾವು ಮತ್ತು ನವ್ಯಾ ರಾಜ್ ಕಲ್ಲಡ್ಕ ಇವರ ಮುಖ ವರ್ಣಿಕೆಯೊಂದಿಗೆ ಗುಣಕರ ಅಗ್ನಡಿಯವರ ಸಹಕಾರದೊಂದಿಗೆ ಪ್ರದರ್ಶನಗೊಳ್ಳಲಿದೆ.
ಬಾಲಕೃಷ್ಣ ಪೆರುವಾಯಿಯವರ ತಂಡದಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್, ಎ. ಎನ್.ಕೊಳಂಬೆ ರಾಮಕುಂಜ, ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿನಗರ, ಹರ್ಷ ಶಾಂತಿನಗರ, ಹೃತೀಕಾ ಕೆ ಬೆಳ್ಳಿಪ್ಪಾಡಿ, ವಿಲಾಸಿನಿ ಶಾಂತಿನಗರ , ಮನ್ವಿತ್ ಬೆಳ್ಳಿಪ್ಪಾಡಿ, ಬಿ. ಪ್ರಣಿತ. ಶಾಂತಿನಗರ, ಇವರ ಅಮೋಘ ಅಭಿನಯದಲ್ಲಿ ನಾಟಕವು ಮೂಡಿ ಬರಲಿದೆ ಎಂದು ತಂಡದ ಸಂಚಾಲಕ ಕಿಶೋರ್ ಜೋಗಿ ಉಬಾರ್ ತಿಳಿಸಿದ್ದಾರೆ. ನಾಟಕ ಪ್ರದರ್ಶನದ ಬುಕಿಂಗ್ ಗೆ ಈ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಿ 9902543273, 073641071, 9008136330. 9980389016 ಎಂದು ಪ್ರಕಟಣೆ ತಿಳಿಸಿದೆ.