ಪುತ್ತೂರು:ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಡಿ.22ರಂದು ಪ್ರತಿಭಾ ದಿನಾಚರಣೆಯನ್ನು ಆಚರಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಪ್ರಸನ್ನ ಭಟ್, ಹರೀಶ್ ಪುತ್ತೂರಾಯ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು ಮಾತನಾಡಿ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ವ್ಯಕ್ತಿ ಚಾರಿತ್ರ್ಯಕ್ಕೆ ಧಕ್ಕೆ ಬಾರದ ಹಾಗೆ ಸಮಾಜದಲ್ಲಿ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದರು.
ಮುಖ್ಯ ಅಭ್ಯಾಗತರಾದ ಪೋಷಕರು ಹಾಗೂ ಅಧ್ಯಕ್ಷರು ಶ್ರೀ ದೇವತಾ ಸಮಿತಿ ಶ್ರೀ ಕ್ಷೇತ್ರ ದೇವಗಿರಿ ತಿಂಗಳಾಡಿಯ ಜಯರಾಮ ರೈ ಮಿತ್ರಂಪಾಡಿ ಮಾತನಾಡಿ, ಈ ವಿದ್ಯಾಸಂಸ್ಥೆಯು ಶಿಕ್ಷಣದ ಜೊತೆ ಉತ್ತಮ ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿದೆ ಇದನ್ನು ಪೋಷಿಸಿ ಮುಂದುವರೆಸಿಕೊಂಡು ಹೋಗುವುದು ವಿದ್ಯಾರ್ಥಿಗಳ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಶ್ರೀ ಸತ್ಯ ಸಾಯಿ ಸೇವಾ ಸಂಘ ದಕ್ಷಿಣ ಕನ್ನಡ ಇದರ ವತಿಯಿಂದ ನಡೆದ ವಲಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡ ಭಾಷಾ ವಿಭಾಗದಲ್ಲಿ ವರ್ಷ ಲಕ್ಷ್ಮಿ (10 ನೇ ತರಗತಿ)
ಪ್ರಥಮ, ದುನೇಶ್ (10 ನೇ ತರಗತಿ) ದ್ವಿತೀಯ, ಜಾಗೃತಿ (8ನೇ ತರಗತಿ ) ತೃತಿಯ.ಹಾಗೂ ಇಂಗ್ಲಿಷ್ ಭಾಷಾ ವಿಭಾಗದಲ್ಲಿ ಮಹೇಶ್ ಕುಮಾರ್ (10ನೇತರಗತಿ) ಪ್ರಥಮ, ಸಾನಿಧ್ಯ (8ನೇ ತರಗತಿ ) ದ್ವಿತೀಯ ಹಾಗೂ ವೈಷ್ಣವ್ (10 ನೇ ತರಗತಿ) ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಪುತ್ತೂರು ಶ್ರೀ ಸತ್ಯಸಾಯಿ ಸಂಚಾಲಕ ದಯಾನಂದ ಬಹುಮಾನ ವಿತರಿಸಿದರು. ಕಲಿಕೆಯಲ್ಲಿ ಉನ್ನತ ಸ್ಥಾನ ಪಡೆದ ಹಾಗೂ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಜಯಮಾಲಾ ವಿ ಎನ್ ಸ್ವಾಗತಿಸಿದರು.ರಮೇಶ್ ವಂದಿಸಿದರು.ಪ್ರಶಾಂತಿ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೀ ಬೋರ್ಡ್, ಸುಗಮ ಸಂಗೀತ ಮತ್ತು ಯಕ್ಷಗಾನ ‘ಸಮುದ್ರಮಥನ -ಸುದರ್ಶನ ವಿಜಯ -ಕಾರ್ತ ವೀರ್ಯಾರ್ಜುನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.