ಗ್ರಾಹಕರ ವಿಶ್ವಾಸದಿಂದ ಸಂಸ್ಥೆಯ ಬೆಳವಣಿಗೆ- ಕುಂಬ್ರ ದುರ್ಗಾಪ್ರಸಾದ್ ರೈ
ಪುತ್ತೂರು: ಭಾರತ್ ಪೆಟ್ರೋಲಿಯಂ ಸಂಸ್ಥೆಯ ಅಧಿಕೃತ ವಿತರಕರಾದ ಜನ್ಮ ಫ್ಯೂಯಲ್ಸ್ ಕುಂಬ್ರ ಇದರ ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಡಿ.20 ರಂದು ನಡೆಯಿತು.
ಭಾರತ್ ಪೆಟ್ರೋಲಿಯಂ ಸಂಸ್ಥೆಯು ದೇಶದಾದ್ಯಂತ ಆಯೋಜಿಸಿರುವ ಫ್ಯೂಲಿಂಗ್ ಕ ಮಹಾ ಉತ್ಸವ್ ಎನ್ನುವ ಲಕ್ಕಿ ಡ್ರಾದಲ್ಲಿ ಕುಂಬ್ರ ಜನ್ಮ ಫ್ಯೂಯಲ್ಸ್ ನ 9 ಮಂದಿ ಗ್ರಾಹಕರು ಹಲವು ಬಹುಮಾನಗಳನ್ನು ಪಡೆದು ವಿಜೇತರಾಗಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಈ ಸಂಸ್ಥೆಯು ಗ್ರಾಹಕರ ವಿಶ್ವಾಸವನ್ನು ಪಡೆದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಬಹುಮಾನ ವಿಜೇತರಾದ ಗಿರೀಶ್ ರೈ ನಿರ್ಪಾಡಿ, ರಜನೀಶ್ ಬೆಳ್ಳಾರೆ, ಯತೀಶ್ ಎಡಮಂಗಿಲ, ಇಬ್ರಾಹಿಂ ಸಾರಪುಣಿ, ಗಣೇಶ್ ಕೌಡಿಚ್ಚಾರ್, ಹುಸೈನ್ ಕುಂಬ್ರ, ನಾಸೀರ್ ಕಟ್ಟತ್ತಾರ್, ಶಿವ ಶಂಕರಿ ಭಟ್ ಪೆರ್ಲಂಪಾಡಿ ಮತ್ತು ಅಬೂಬಕ್ಕರ್ ಅಡೂರು ಅವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಸಂಸ್ಥೆಯ ಮಾಲಕರಾದ ಹರ್ಷ ಕುಮಾರ್ ರೈ ಮಾಡಾವು, ಆಡಳಿತಗಾರರಾದ ಹನೀಫ್ ಬಾಯಂಬಾಡಿ ಧನ್ಯವಾದ ಸಲ್ಲಿಸಿದರು. ಜನ್ಮ ಫ್ಯೂಯಲ್ಸ್ ನ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.